ಪಿ ಎನ್ ಬಿ ವಂಚನೆ ಪ್ರಕರಣ: 5 ದೇಶಗಳಲ್ಲಿನ ನೀರವ್ ಮೋದಿ ಆಸ್ತಿ ಜಪ್ತಿ ಮಾಡಿದ ಇಡಿ

ನವದೆಹಲಿ: ಪಿ ಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ನೀರವ್​ ಮೋದಿ ಅವರಿಗೆ ಸಂಬಂಧಿಸಿದ 637 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.

ಭಾರತ ಸೇರಿ 5 ದೇಶಗಳಲ್ಲಿನ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಸುಮಾರು 22.69 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ. ಲಂಡನ್, ನ್ಯೂಯಾರ್ಕ್​ ಹಾಗೂ ಮುಂಬೈನಲ್ಲಿರುವ ಆಸ್ತಿಗಳನ್ನು ಇಡಿ ವಶಕ್ಕೆ ಪಡೆದಿದೆ.

ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಗೆ ವಜ್ರ ವ್ಯಾಪಾರಿ ನೀರವ್​ ಮೋದಿ ಹಾಗೂ ಅವರ ಚಿಕ್ಕಪ್ಪ​ ಛೋಕ್ಸಿ 13,400 ಕೋಟಿ ರೂ. ಸಾಲ ಪಡೆದು ಹಿಂದಿರುಗಿಸಲಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ