ಮುದ್ದಯ್ಯನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಿಯವರ 150ನೇ ಜಯಂತಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 115ನೇ ಜಯಂತಿ

ಬೆಂಗಳೂರು, ಅ.1- ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಮುದ್ದಯ್ಯನಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆ ಬೆಳಗ್ಗೆ 8 ಗಂಟೆಗೆ ರಂಗಪರಂಪರೆ ಟ್ರಸ್ಟ್ ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜಯಂತಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿ ಅವರ 115ನೇ ಜಯಂತಿ ಸಮಾರಂಭವನ್ನು ಏರ್ಪಡಿಸಲಾಗಿದೆ.
ಕಲಾವಿದರಾದ ರಾಮಚಂದ್ರ, ಎಂ.ವಿ.ಸಿದ್ದಗಂಗಯ್ಯ, ಎಂ.ಬಿ.ಚಂದ್ರಶೇಖರಯ್ಯ, ತಾವರೆಕೆರೆ ಗ್ರಾಪಂ ಸದಸ್ಯ ಸಂಜೀವಯ್ಯ, ಮುಖ್ಯಶಿಕ್ಷಕ ಅಣ್ಣಯ್ಯಪ್ಪ, ಕಾಮಿಡಿ ಇಲಾಡಿ ಖ್ಯಾತಿಯ ಗೋವಿಂದೇಗೌಡ, ಟ್ರಸ್ಟ್‍ನ ವ್ಯವಸ್ಥಾಪಕ ಧನ್ವಂತ್ರಿ ಭಾಗವಹಿಸುವರು.

ವಿಚಾರ ಸಂಕಿರಣ:
ಮಾಗಡಿ ರಸ್ತೆ ಕೆಂಪೇಗೌಡನಗರದ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘದವತಿಯಿಂದ ಕೆಂಪೇಗೌಡ ನಗರ ಸಂಸಾರ ಸದನದಲ್ಲಿ ಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿಯವರ ಜಯಂತಿಗಳ ಸಂಭ್ರಮಾಚರಣೆ, ರಂಗಗೀತೆ, ಉಪನ್ಯಾಸ, ವಿಚಾರ ಸಂಕಿರಣ ಹಾಗೂ ಸ್ವಚ್ಛತೆಯೇ ಸೇವೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಮತ್ತು ಸ್ವಚ್ಛತೆಯೇ ಸೇವಾ ಅಭಿಯಾನಕ್ಕೆ ಚಾಲನೆ, ಸಂಜೆ 5 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಂಸ್ಕøತಿಕ ಚಿಂತಕ ಎಂ.ಪ್ರಕಾಶ್‍ಮೂರ್ತಿ, ರಂಗ ನಿರ್ದೇಶಕರಾದ ಎಚ್.ಎನ್.ಆನಂದ್‍ಮೂರ್ತಿ, ಡಿ.ವೆಂಕಟರಮಣಯ್ಯ, ಪರಿಸರ ತಜ್ಞ ಇ.ವೀರೇಂದ್ರ ಭಾಗವಹಿಸುವರು.
ಕಲಾವಿದರಾದ ಪುರುಷೋತ್ತಮ, ರಘುಪತಿ, ವೆಂಕಟೇಶ್, ಮಂಜುನಾಥ್ ಸಂಕಣ್ಣನವರ್, ಅನ್ನಪೂರ್ಣ, ಧನಂಜಯ, ಐಶ್ವರ್ಯ, ಶ್ರೀಹರಿ, ನಿತ್ಯ, ಹರ್ಷಿತಾ, ದಿಲೀಪ, ಸುರೇಶ್, ಶ್ರೀಕಾಂತ್, ಎಚ್.ವಿ.ಶ್ರೀನಿವಾಸಯ್ಯ, ಕೆ.ಟಿ.ಕೃಷ್ಣಪ್ಪ, ಎಚ್.ಶಿವಣ್ಣ, ಹನುಮಂತಯ್ಯ ಮತ್ತಿತರರು ಉಪಸ್ಥಿತರಿರುವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ