
ನಾನು ಅವನಲ್ಲ ಅವಳು ವಿಭಿನ್ನ ಚಿತ್ರವನ್ನು ನಿರ್ದೇಶಿಸಿದ್ದ ಬಿಎಸ್ ಲಿಂಗದೇವರು ಅವರು ‘ದಾರಿ ತಪ್ಪಿಸು ದೇವರೆ’ ಚಿತ್ರವನ್ನು ಕೈಗೆತ್ತಿಕೊಂಡಿದ್ದು ಚಿತ್ರದಲ್ಲಿ ನಾಯಕನಾಗಿ ರಿಶಿ ಅಭಿನಯಿಸುವ ಸಾಧ್ಯತೆ ಇದೆ.
ಮೌನಿ ಮತ್ತು ಕಾದ ಬೆಳದಿಂಗಳು ಚಿತ್ರಗಳನ್ನು ನಿರ್ದೇಶಿಸಿದ್ದ ಬಿಎಸ್ ಲಿಂಗದೇವರು ಅವರು ಇದೀಗ ದಾರಿ ತಪ್ಪಿಸು ದೇವರೆ ಚಿತ್ರದ ಸ್ಕ್ರಿಪ್ಟ್ ನಲ್ಲಿ ಬ್ಯುಸಿಯಾಗಿದ್ದು ನವೆಂಬರ್ ಚಿತ್ರ ಸೆಟ್ಟೇರಲಿದೆ.
ಚಿತ್ರಕಥೆ ನಂತರ ನನಗೆ ಅಪರೇಷನ್ ಅಲಮೇಲಮ್ಮ ಚಿತ್ರದ ನಟ ರಿಶಿ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಅನಿಸಿತು. ಅದೇ ರೀತಿ ಅವರ ಜೊತೆ ಮಾತುಕತೆ ನಡೆಸಿದ್ದೇನೆ ಆದರೆ ಇನ್ನು ಅಗ್ರಿಮೆಂಟ್ ಮಾಡಿಲ್ಲ ಎಂದು ಲಿಂಗದೇವರು ಹೇಳಿದ್ದಾರೆ.