ಬೆಂಗಳೂರು,ಸೆ.30- ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಕೆ.ಜೈರಾಜ್ ಅವರು ರಾಜ್ಯ ಸರ್ಕಾರ ಹಾಗೂ ಸಮಾಜಕ್ಕೆ ಶಾಶ್ವತವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಭೆರೇಗೌಡ ಶ್ಲಾಘಿಸಿದರು.
ನಗರದಲ್ಲಿಂದು ಅಂಕಿತ ಪುಸ್ತಕ ಪ್ರಕಾಶನ ಹೊರತಂದ ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್ ಅವರ ಆಡಳಿತ ಅನುಭವಗಳನ್ನೊಳಗೊಂಡ ರಾಜಮಾರ್ಗ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೈರಾಜ್ ಅವರು ಕೆಪಿಸಿಎಲ್ನ ವ್ಯವಸ್ಥಾಪಕ ನಿರ್ದೇಶಕರಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕವನ್ನು ಆರಂಭಿಸುವ ಮೂಲಕ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಭವಿಷ್ಯದ ಕರ್ನಾಟಕಕ್ಕೆ ಅವರು ನೀಡಿದೆ ಕೊಡುಗೆ ಅಪಾರವಾಗಿದೆ ಎಂದರು.
ಉತ್ತಮ ಜನಸೇವೆ ಮಾಡುವಲ್ಲಿಯೂ ಜೈರಾಜ್ ಯಶಸ್ವಿಯಾಗಿದ್ದಾರೆ ಎಂದ ಸಚಿವರು, ನಕರಾತ್ಮಕ ಸಂಗತಿಗಳಿಗೆ ಸಿಗುವಂತಹ ಆದ್ಯತೆ ಸಕರಾತ್ಮಕ ವಿಚಾರಗಳಿಗೆ ದೊರೆಯುವುದು ವಿರಳ. ಆದರೆ ಜೈರಾಜ್ ಅವರು ಟೀಕೆ, ಟಿಪ್ಪಣಿ ಬಿಟ್ಟು ಉತ್ತಮ ಅಭಿಪ್ರಾಯವನ್ನು ಬಿಂಬಿಸಿರುವುದು ಸಂತಸವಾಗಿದೆ. ಇದು ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂದು ಹೇಳಿದರು.
ಶಿಕ್ಷಣ ತಜ್ಞ ಡಾ.ಕರಜಗಿ, ಸುಪ್ರೀಂಕೋರ್ಟ್ನ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ಚಲನಚಿತ್ರ ನಿರ್ದೇಶಕ ಟಿ.ಎನ್.ಸೀತಾರಾಮ್, ಇನ್ಫೋಸಿಸ್ನ ಸಂಸ್ಥಾಪಕ ನಾರಾಯಣಮೂರ್ತಿ, ಎ.ಎನ್.ಪ್ರಹ್ಲಾದ್ ರಾವ್ ಮುಂತಾದವರು ಇದ್ದರು.