ಇಸ್ಪೀಟ್ ಜೂಜಾಟ ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ

ಬೆಂಗಳೂರು, ಸೆ.30- ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಕ್ಲಬ್‍ವೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು 43 ಮಂದಿ ಆರೋಪಿಗಳನ್ನು ಬಂಧಿಸಿ 18.92 ಲಕ್ಷ ರೂ. ನಗದು, ವಿವಿಧ ಮುಖಬೆಲೆಯ ಟೋಕನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಲ್ಸನ್‍ಗಾರ್ಡನ್ 9ನೇ ಕ್ರಾಸ್‍ನ ಕ್ಲಬ್‍ವೊಂದರಲ್ಲಿ ಜೂಜಾಟ ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೆÇಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದ 43 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು 18,92,970 ರೂ. ನಗದು, ವಿವಿಧ ಮುಖಬೆಲೆಯ ಟೋಕನ್‍ಗಳು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅಪರಾಧ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಅಲೋಕ್‍ಕುಮಾರ್, ಡಿಸಿಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಸಹಾಯಕ ಪೆÇಲೀಸ್ ಆಯುಕ್ತರಾದ ಪಿ.ಟಿ.ಸುಬ್ರಹ್ಮಣ್ಯ, ಮಂಜುನಾಥ್ ಚೌದರಿ, ಡಾ.ವೆಂಕಟೇಶ್ ಪ್ರಸನ್ನ ಹಾಗೂ ಇನ್ಸ್‍ಪೆಕ್ಟರ್‍ಗಳಾದ ರಾಜು, ಅಶ್ವತ್ಥಗೌಡ, ಬಿ.ಮಂಜುನಾಥ್, ಪ್ರಕಾಶ್ ರಾಥೋಡ್, ಮೊಹಮ್ಮದ್ ಶರೀಫ್, ಡಾ.ಬಿ.ಎಸ್.ಸುಧಾಕರ್, ರಮೇಶ್, ಯತಿರಾಜ್, ಕೆ.ಸಿ.ಗಿರಿ, ಬಿ.ಎಂ.ಶ್ರೀನಿವಾಸ್ ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ