ಬೆಂಗಳೂರು: ದಕ್ಷಿಣ ಭಾರತೀಯ ಹಾಗೂ ಬಾಲಿವುಡ್ ನಟ ದೇವ್ ಗಿಲ್ ಕನ್ನಡ ಸಿನಿಮಾಗೆ ಮರಳಿದ್ದಾರೆ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಆರೇಂಜ್ ಸಿನಿಮಾದಲ್ಲಿ ಮಗಧೀರ ಖಳನಾಯಕ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ,
ಪ್ರಶಾಂತ್ ರಾಜ್ ನಿರ್ದೇಶಿಸುತ್ತಿರುವ ಸಿನಿಮಾ ಸೆಪ್ಟಂಬರ್ 29 ರಂದು ರಿಲೀಸ್ ಆಗಲಿದೆ. ಲವ್ ಗುರು, ಗಾನಾ ಬಜಾನಾ ಮತ್ತು ಝೂಮ್ ಸಿನಿಮಾಗಳನ್ನು ಪ್ರಶಾಂತ್ ರಾಜ್ ನಿರ್ದೇಶಿಸಿದ್ದಾರೆ
ಗಣೇಶ್ ಗೆ ನಾಯಕಿಯಾಗಿ ಬಾಲಿವುಡ್ ನಾಯಕಿ ಪ್ರಿಯಾ ಆನಂದ್ ನಟಿಸಿದ್ದಾರೆ ಪ್ರಿಯಾ ರಾಜಕುಮಾರ ಸಿನಿಮಾದಲ್ಲಿ ಪುನಿತ್ ಜೊತೆ ಅಭಿನಯಿಸಿದ್ದರು.