
ಇಸ್ಲಾಮಾಬಾದ್: ಉಭಯ ದೇಶಗಳ ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯೊಬ್ಬ ವಾಲೆಟ್ ಕದಿಯುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ.
ಪಾಕ್ ಅಧಿಕಾರಿ ಪರ್ಸ್ ಕದಿಯುತ್ತಿರುವ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಜರಾರ್ ಹೈದರ್ ಖಾನ್, ಕುವೈತ್ ಅಧಿಕಾರಯ ಪರ್ಸ್ ಕದ್ದ ಅಧಿಕಾರಿ.
ಜರಾರ್ ಪಾಕಿಸ್ತಾನದ ಗ್ರೇಡ್ 20 ಜಿಒಪಿ ಅಧಿಕಾರಿ. ಪರ್ಸ್ ಕಳೆದು ಹೋಗಿರುವುದಾಗಿ ಕುವೈತ್ ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಹಾಲ್ ನಲ್ಲಿ ಅಳವಡಿಸಿದ್ದ ಸಿಸಿ ಟಿವಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತು ಬೇಸರ ವ್ಯಕ್ತಪಡಿಸಿರುವ ಪಾಕ್ ಹಣಕಾಸು ಸಚಿವರು, ಅಧಿಕಾರಿ ಜರಾರ್ ನನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.