
ಬೆಂಗಳೂರು :ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುರೇಶ್ ಅಲಿಯಾಸ್ ಕಲ್ಲು ಪಾಳ್ಯ್ ಸೂರಿ ಮೇಲೆ ಬ್ಯಾಡರಹಳ್ಳಿಯ ಇನ್ಸ್ ಪೆಕ್ಟರ್ ಸತ್ಯ ನಾರಾಯಣ ಗುಂಡಿನ ದಾಳಿ ನಡೆಸಿದ್ದಾರೆ ಮೂಲತಃ ಕುಣಿಗಲ್ ಮೂಲದವನಾದ ಈತ ನಿನ್ನೆ ಮಾಗಡಿ ರಸ್ತೆಯಲ್ಲಿ ದಿನಕರ್ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಇಂದು ಬಂಧಿಸಲು ತೆರಳಿದ್ದ ಸಮಯದಲ್ಲಿ ಪೆÇಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ ಇದರಿಂದ ಆತ್ಮ ರಕ್ಷಣೆಗಾಗಿ ಬ್ಯಾಡರಹಳ್ಳಿ ಪೊಲೀಸ ಠಾಣೆ ಇನ್ಸ್ ಪೆಕ್ಟರ್ ಸತ್ಯನಾರಾಯಣ ಗುಂಡು ಹಾರಿಸಿ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ