ಲೈಂಗಿಕ ಶೋಷಣೆ ವಿರುದ್ಧ ಹೋರಾಡಲು ಬದ್ಧ: ವಿಶ್ವಸಂಸ್ಥೆಗೆ 48 ರಾಷ್ಟ್ರ ನಾಯಕರ ಹೇಳಿಕೆ

ವಿಶ್ವಸಂಸ್ಥೆ, ಸೆ.28-ಜಗತ್ತಿನ ವಿವಿಧ ದೇಶಗಳಲ್ಲಿ ಗಂಭೀರ ಸಮಸ್ಯೆಯಾಗಿರುವ ಲೈಂಗಿಕ ಶೋಷಣೆ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 48 ಅಗ್ರ ನಾಯಕರು ವಿಶ್ವಸಂಸ್ಥೆಗೆ ಸಾಥ್ ನೀಡಿದ್ದಾರೆ.

ಈ ಪಿಡುಗಿನ ವಿರುದ್ಧ ಹೋರಾಟದಲ್ಲಿ ಬೆಂಬಲ ನೀಡುವುದಾಗಿ ಮೋದಿ ಮತ್ತು ಇತರ ನಾಯಕರುಗಳು ವಿಶ್ವಸಂಸ್ಥೆ ಮಹಾಪ್ರಧಾನಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಅವರಿಗೆ ಸಾಮೂಹಿಕ ಬದ್ಧತೆಯ ಹೇಳಿಕೆಯನ್ನು ನೀಡಿದ್ದಾರೆ.

ವಿಶೇಷವಾಗಿ ಆಫ್ರಿಕಾ ಖಂಡದ ರಾಷ್ಟ್ರಗಳಲ್ಲಿ ಲೈಂಗಿಕ ಶೋಷಣೆ ಮತ್ತು ದುರಾಚಾರ ಪ್ರಕರಣಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಈ ಪಿಡುಗನ್ನು ನಿವಾರಿಸಲು ಭಾರತ ಸೇರಿದಂತೆ ವಿಶ್ವಸಂಸ್ಥೆ ಶಾಂತಿ ಪಾಲನಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಗಳನ್ನು ನಿಗ್ರಹಿಸಲು ವಿಶ್ವಸಂಸ್ಥೆ ಮುಖ್ಯಸ್ಥರು 2017ರಲ್ಲಿ ಆಂದೋಲನ ಆರಂಭಿಸಿದ್ದರು. ಆಗಿನಿಂದಲೂ ಪ್ರಧಾನಿ ನರೇಂದ್ರ ಹಾಗೂ ವಿಶ್ವದ ಪ್ರಮುಖ ರಾಷ್ಟ್ರಗಳ ಅಗ್ರ ನಾಯಕರು ಇದಕ್ಕೆ ಬೆಂಬಲ ನೀಡುತ್ತಿದ್ದು, ಅದನ್ನು ಮುಂದುವರೆಸುವ ಸಾಮೂಹಿಕ ಪ್ರಮಾಣ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ