7ನೇ ಬಾರಿಗೆ ಟೀಂ ಇಂಡಿಯಾ ಏಷ್ಯಾ ಚಾಂಪಿಯನ್

ದುಬೈ: ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಏಳನೇ ಬಾರಿಗೆ ಏಷ್ಯಾಕಪ್​ ಚಾಂಪಿಯನ್ನಘಾಇ ಹೊರ ಹೊಮ್ಮಿದೆ.
ದುಬೈನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ 233 ರನ್​ಗಳ ಸಾಧಾರಣ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ತಿಣುಕಾಡಿ ಗೆದ್ದುಕೊಂಡಿತು. ಶಿಖರ್​ ಧವನ್ (48), ಶಿಖರ್​ ಧವನ್​ ( 15), ಅಂಬಾಟಿ ರಾಯ್ಡು (2), ದಿನೇಶ್​ ಕಾರ್ತಿಕ್ ( 37), ಧೋನಿ (36), ಕೇದಾರ್​ ಜಾಧವ್ ಅಜೇಯ (23), ರವೀಂದ್ರ ಜಡೇಜಾ (23), ಭುವನೇಶ್ವರ್ ಕುಮಾರ್ (21)ಮತ್ತು ಕುಲ್​ದೀಪ್​ ಯಾದವ್​ ಅಜೇಯ (5) ರನ್​ಗಳಿಸಿದ್ರು
ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್​ ಮನ್ ಲಿಟನ್​ ದಾಸ್​ (121 ), ಸೌಮ್ಯ ಸರ್ಕಾರ್ (33), ಮಹಿದಿ ಹಸನ್ (32) ನೆರವಿನಿಂದ 48.3 ಓವರ್​ಗಳಲ್ಲಿ 222 ರನ್​ ಗಳಿಸಿತು. ಭಾರತ ಪರ ಕುಲ್​ದೀಪ್​ ಯಾದವ್ 3 ವಿಕೆಟ್ ಪಡೆದು ಮಿಂಚಿದ್ದರು. ಈ ಗೆಲುವಿನೊಂದಿಗೆ ಸತತ ಎರಡನೇ ಬಾರಿಗೆ ಏಷ್ಯಾ ಕಿರೀಟ ಧರಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ