ದುಬೈ: ಕೊನೆಯ ಎಸೆತದಲ್ಲಿ ರೋಚಕ ಗೆಲುವು ದಾಖಲಿಸುವ ಮೂಲಕ ಟೀಂ ಇಂಡಿಯಾ ಏಳನೇ ಬಾರಿಗೆ ಏಷ್ಯಾಕಪ್ ಚಾಂಪಿಯನ್ನಘಾಇ ಹೊರ ಹೊಮ್ಮಿದೆ.
ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 233 ರನ್ಗಳ ಸಾಧಾರಣ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ತಿಣುಕಾಡಿ ಗೆದ್ದುಕೊಂಡಿತು. ಶಿಖರ್ ಧವನ್ (48), ಶಿಖರ್ ಧವನ್ ( 15), ಅಂಬಾಟಿ ರಾಯ್ಡು (2), ದಿನೇಶ್ ಕಾರ್ತಿಕ್ ( 37), ಧೋನಿ (36), ಕೇದಾರ್ ಜಾಧವ್ ಅಜೇಯ (23), ರವೀಂದ್ರ ಜಡೇಜಾ (23), ಭುವನೇಶ್ವರ್ ಕುಮಾರ್ (21)ಮತ್ತು ಕುಲ್ದೀಪ್ ಯಾದವ್ ಅಜೇಯ (5) ರನ್ಗಳಿಸಿದ್ರು
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್ ಮನ್ ಲಿಟನ್ ದಾಸ್ (121 ), ಸೌಮ್ಯ ಸರ್ಕಾರ್ (33), ಮಹಿದಿ ಹಸನ್ (32) ನೆರವಿನಿಂದ 48.3 ಓವರ್ಗಳಲ್ಲಿ 222 ರನ್ ಗಳಿಸಿತು. ಭಾರತ ಪರ ಕುಲ್ದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದ್ದರು. ಈ ಗೆಲುವಿನೊಂದಿಗೆ ಸತತ ಎರಡನೇ ಬಾರಿಗೆ ಏಷ್ಯಾ ಕಿರೀಟ ಧರಿಸಿತು.