ಸರ್ಜಿಕಲ್ ಸ್ಟ್ರೈಕ್ ಎರಡನೇ ವರ್ಷಾಚರಣೆ: ಪರಾಕ್ರಮ ಪರ್ವಕ್ಕೆ ಪ್ರಧಾನಿ ಚಾಲನೆ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಗೆ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಾಕ್ರಮ ಪರ್ವ ಮಿಲಿಟರಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಜೋಧ್‌ಪುರ ಸೇನಾ ನೆಲೆಯಲ್ಲಿ ನಡೆದ ನಿರ್ಧಿಷ್ಟ ದಾಳಿ ಸಂಭ್ರಮಾಚರಣೆ ಸಮಾರಂಭದ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ಕೋನಾರ್ಕ್‌ ಕಾರ್ಪ್ಸ್‌ ಪರಾಕ್ರಮ ಪರ್ವ ವಸ್ತು ಪ್ರದರ್ಶನಕ್ಕೆ ಪ್ರಧಾನಿ ಚಾಲನೆ ನೀಡಿದ್ದಾರೆ.ಇದೇ ವೇಳೆ ಕೋನಾರ್ಕ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಗೌರವ ಸಲ್ಲಿಸಿದರು.

ರಾಜಸ್ಥಾನ ಸಿಎಂ ವಸುಂಧರಾ ರಾಜೇ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​, ಸೇನಾ ಮುಖ್ಯಸ್ಥ ಬಿಪಿನ್​ ರಾವತ್​ ಪ್ರಧಾನಿಗೆ ಸಾಥ್‌ ನೀಡಿದ್ದಾರೆ.

ಭಾರತೀಯ ಸೇನೆಯ ಶೌರ್ಯ ಮತ್ತು ಸಾಧನೆಗಳನ್ನು ಎತ್ತಿ ಹಿಡಿಯುವ ಸಲುವಾಗಿ ಸರ್ಜಿಕಲ್​ ಸ್ಟ್ರೈಕ್​​ನ ಸ್ಮರಣಾರ್ಥ ಮೂರು ದಿನಗಳವರೆಗೆ ಪರಾಕ್ರಮ ಪರ್ವ​​ ಸಂಭ್ರಮಾಚರಣೆಗೆ ಕರೆ ನೀಡಲಾಗಿದ್ದು, ಇಂಡಿಯಾ ಗೇಟ್​​ ಬಳಿ 3 ದಿನಗಳವರೆಗೆ ಪರಾಕ್ರಮ ಪರ್ವ ನಡೆಯಲಿದೆ.

ಈ ವೇಳೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯ ಪರಿಸ್ಥಿತಿ, ಚೀನಾ ಜತೆಗಿನ ಗಡಿ ನಿಯಂತ್ರಣ ಸ್ಥಿತಿ ಮತ್ತು ಕಾಶ್ಮೀರ ಕಣಿವೆಯಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಭಾರತದ ಮೂರು ಸೇನಾಪಡೆಗಳ ಮುಖ್ಯಸ್ಥರು ವಿವರಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ