ಕಾಂಗ್ರೆಸ್ ಒಂದು ’ಬ್ರೇಕ್ ಇಂಡಿಯಾ ಗ್ಯಾಂಗ್; ಅವಿವೇಕಿಗಳಿಗೆ ಮಾತ್ರ ಸ್ಥಾನ ನೀಡಿರುವ ಪಕ್ಷ: ಅಮಿತ್ ಶಾ

ನವದೆಹಲಿ: ಐವರು ಸಾಮಾಜಿಕ ಹೋರಾಟಗಾರರ ಬಂಧನ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಎಲ್ಲಾ ಬಗೆಯ ಅವಿವೇಕಿಗಳಿಗೆ ಈಗ ಕಾಂಗ್ರೆಸ್ ಮಾತ್ರ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಒಂದು ’ಬ್ರೇಕ್ ಇಂಡಿಯಾ ಗ್ಯಾಂಗ್’ ಆಗಿದ್ದು ಮಾವೋವಾದಿಗಳು, ನಕಲಿ ಹೋರಾಟಗಾರರು, ಮತ್ತು ಭ್ರಷ್ಟಾಚಾರಿಗಳಿಗೆ ಸದಾ ರಕ್ಷಣೆ ನಿಡುತ್ತದೆ. ಇಂತಹಾ ರಾಹುಲ್ ಗಾಂಧಿಯ ಕಾಂಗ್ರೆಸ್ ಗೆ ಸ್ವಾಗತ ಎಂದು ಅಮಿತ್ ಶಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಭೀಮಾ ಕೊರೆಗಾಂವ್ ಎನ್ನುವ ಹ್ಯಾಶ್ ಟ್ಯಾಗ್ ಬಳಸಿರುವ ಶಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಆಗಸ್ಟ್ 28 ರಂದು ಪ್ರಕಟಿಸಿದ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಗಾಂಧಿ ಈ ಹಿಂದಿನ ಟ್ವೀಟ್ ನಲ್ಲಿ “ಭಾರತದಲ್ಲಿ ಏಕೈಕ ಎನ್ ಜಿಓ ಸಕ್ರಿಯವಾಗಿದ್ದು ಅದುವೇ ಆರ್ ಎಸ್ ಎಸ್ ಎಂದು ವ್ಯಂಗ್ಯವಾಡಿದ್ದರು.

ಎಲ್ಲಾ ಇತರೆ ಎನ್ ಜಿಓಗಳನ್ನು ಮುಚ್ಚಿ, ಎಲ್ಲಾ ಹೋರಾಟಗಾರರನ್ನು ಜೈಲಿಗಟ್ಟುವ, ದೂರು ಸಲ್ಲಿಸಿದವರನ್ನು ಶೂಟ್ ಮಾಡಿ ಕೊಲ್ಲುವ ನವ ಭಾರತಕ್ಕೆ ಸ್ವಾಗತ” ಎಂದು ರಾಹುಲ್ ಟ್ವೀಟ್ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ