ಬೆಂಗಳೂರು, ಸೆ.28-ಪ್ರವಾಸಿ ತಾಣಗಳನ್ನು ಜಾಗತಿಕವಾಗಿ ಹೆಚ್ಚು ಪ್ರಚಾರಗೊಳಿಸಲು ಡಿಜಿಟಲ್ ತಂತ್ರಜ್ಞಾನ ಸಹಕಾರಿಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ರಮ್ಯ ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಇಲಾಖೆಯು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ, ಜಿಲ್ಲಾ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರವಾಸೋದ್ಯಮ ಹಾಗೂ ಡಿಜಿಟಲ್ ರೂಪಾಂತರ ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಜಗತ್ತಿನ ಬಹುತೇಕ ಜನರು ಸ್ಮಾರ್ಟ್ ಪೆÇೀನ್‍ಗಳನ್ನು ಬಳಸುತ್ತಿದ್ದು, ಅಂಗೈಯಲ್ಲೇ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಗೂಗಲ್, ವಿಕಿಪೀಡಿಯಾ, ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಸಿ ಸ್ಥಳಗಳ ಮಾಹಿತಿ, ವಿವರಗಳನ್ನು ದಾಖಲಿಸುವುದರಿಂದ ಪ್ರವಾಸಿಗರು ಆಕರ್ಷಿತಗೊಂಡು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮದ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ಮುಖ್ಯ ಯೋಜನಾಧಿಕಾರಿ ವಿನುತಾರಾಣಿ.ಬಿ, ಮುಖ್ಯ ಲೆಕ್ಕಾಧಿಕಾರಿ ಟಿ.ಆರ್.ಶೋಭ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರವೀಂದ್ರ.ಎನ್, ಸಹಾಯಕ ನಿರ್ದೇಶಕ ಡಾ||ಶ್ರೀನಾಥ್.ಕೆ.ಎಸ್, ಕೌಶಲ್ಯ ವಿಕಾಸ್ ಫೌಂಡೇಷನ್‍ನ ಸಿಇಓ, ಪಿ.ಎನ್.ಮೂರ್ತಿ, ಐಎಂಎ ಉಪಾಧ್ಯಕ್ಷ ಸಿ.ಎ.ಗುರುಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.