ಗೂಗಲ್​ಗೆ ಇಪ್ಪತ್ತರ ಸಂಭ್ರಮ, ವಿಶೇಷ ವಿಡಿಯೋ ಮೂಲಕ ಧನ್ಯವಾದ

ನವದೆಹಲಿ: ಸರ್ಚ್​ ಇಂಜಿನ್ ದೈತ್ಯ ಗೂಗಲ್​ಗೆ ಇಂದು ಇಪ್ಪತ್ತನೇ ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯ ಸಂದರ್ಭದಲ್ಲಿ ಸ್ಪೆಷಲ್ ವಿಡಿಯೋ ಒಂದನ್ನು ಧನ್ಯವಾದ ರೂಪದಲ್ಲಿ ಗೂಗಲ್ ಹಂಚಿಕೊಂಡಿದೆ.

20 ವರ್ಷದ ಹಿಂದೆ ಆರಂಭವಾದ ಗೂಗಲ್ ಇಂದು ದೈತ್ಯ ಸರ್ಚ್​ ಇಂಜಿನ್ ಆಗಿ ಬೆಳೆದಿದೆ. ಸದ್ಯ 150 ಭಾಷೆಗಳಲ್ಲಿ 190 ದೇಶಗಳಲ್ಲಿ ಗೂಗಲ್ ಬಳಕೆಯಾಗುತ್ತಿದೆ.

ಸ್ಯಾನ್​ಫೋರ್ಡ್​ ವಿವಿಯ ಲ್ಯಾರಿ ಪೇಜ್ ಹಾಗೂ ಸರ್ಜಿ ಬ್ರಿನ್ ಗೂಗಲ್​ಅನ್ನು ಪ್ರಾಜೆಕ್ಟ್ ಕೆಲಸಕ್ಕಾಗಿ ಆರಂಭಿಸಿದ್ದರು. ತಾನು ಬೆಳೆದುಬಂದಿರುವ ಹಾದಿಯನ್ನು ಮೆಲುಕು ಹಾಕಿಕೊಂಡಿರುವ ಗೂಗಲ್ ಒಂದೂವರೆ ನಿಮಿಷದ ವಿಡಿಯೋದಲ್ಲಿ ಪ್ರಮುಖ ಅಂಶಗಳನ್ನು ಬಳಕೆದಾರರಿಗೆ ತಿಳಿಸಿದೆ. ಜೊತೆಗೆ ಕೊನೆಯಲ್ಲಿ ಎಲ್ಲಾ ಬಳಕೆದಾರರಿಗೆ ಧನ್ಯವಾದ ಸಲ್ಲಿಸಿದೆ

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ