ರಸ್ತೆ ಕಾಮಗಾರಿ ಮುಗಿಯದೆ ಇದ್ದರು ಟೋಲ್ ವಸೂಲಿ ಸುಕಜವೇ ವತಿಯಿಂದ ಪ್ರತಿಭಟನೆ

ದೊಡ್ದಬಳ್ಳಾಪುರ: ಯಲಹಂಕ ಮತ್ತು ಹಿಂದೂಪುರ ಮಾರ್ಗದ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ಮುಗಿಯದೆ ಇದ್ದರು ಹಾಗೂ ಸೂಕ್ತ ಸೌಲಭ್ಯಗಳನ್ನು ಕಲ್ಪಿಸದೆ ವಾಹನ ಸವಾರರ ಬಳಿ ಟೋಲ್ ವಸೂಲಿ ಮಾಡಲಾಗುತ್ತಿರುವುದನ್ನು ಖಂಡಿಸಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಕಾರ್ಯಕರ್ತರು ಟೋಲ್ ಬಳಿ ಪ್ರತಿಭಟನೆ ನಡೆಸಿದರು
ಸುಕಜವೇ ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ ಯಲಹಂಕ ದಿಂದ ಆಂದ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಸುಮಾರು ಹದಿನೈದು ಕಡೆ ಇನ್ನು ಕಾಮಗಾರಿ ಮುಗಿದಿಲ್ಲ ಕೆಲವು ಕಡೆ ಯಲ್ಲ ಸಿಂಗಲ್ ರಸ್ತೆಯೇ ಇದೆ ಗುಂಜೂರು ಮತ್ತು ಸುರದೇನಪುರದ ಟೋಲ್‍ಗಳ ಬಳಿ ರಸ್ತೆ ಮಧ್ಯದಲ್ಲಿ ಅಪಘಾತಗಳಾದರೆ ಸೂಕ್ತವಾದ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಲ್ಲ ಕುಡಿಯುವ ನೀರು ಕನಿಷ್ಟ ಶೌಚಾಲಯದ ವ್ಯವಸ್ಥೆಯನ್ನು ಮಾಡದೆ ವಾಹನನ ಸವಾರರ ಬಳಿ ಟೋಲ್ ಸಂಗ್ರಹ ಮಾಡುವುದು ಖಂಡನೀಯಾವಾಗಿದೆ ಎಂದರು
ಹಾಗೂ ಸ್ಥಳೀಯ ನಾಗರಿಕರು ಸಂಚರಿಸಲು ಕೂಡಲೆ ಸರ್ವಿಸ್ ರಸ್ತೆ ನಿರ್ಮಿಸಬೇಕು ಇಲ್ಲವಾದಲ್ಲಿ ಸ್ಥಳೀಯ ರೈತರು ತರಕಾರಿ ವಾಹನಗಳು ರೈತರ ಟ್ರಾಕ್ಟರ್‍ಗಳು ಸಂಚರಿಸಲು ಉಚಿತ ಪಾಸ್ ವಿತರಣೆ ಮಾಡಬೇಕು ಹದಿನೈದು ದಿನಗಳ ಒಳಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಶೌಚಾಲಯ ಸೂಕ್ತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸುಕಜವೇವತಿಯಿಂದ ಆರ್ ಆರ್ ಸಿ ಎಲ್ ಕಂಪನಿಯವರಿಗೆ ಮನವಿ ಪತ್ರ ನೀಡಿ ಕಲ್ಪಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು, ಪ್ರತಿಭಟನೆಯಲ್ಲಿ ಸುಕಜವೇ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ