ದುಬೈ: ಟೀಂ ಇಂಡಿಯಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿತು.
ನಿನ್ನೆ ದುಬೈನಲ್ಲಿ ನಡೆದ ಸೂಪರ್ ಫೋರ್ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿದ ಪರಿಣಾಮ ಟೀಂ ಇಂಡಿಯಾದ ಗೆಲುವು ಕೈಜಾರಿತು.
253 ರನ್‍ಗಳ ಸವಾಲಿನ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸ್ ಮನ್‍ಗಳಾದ ಕೆ.ಎಲ್. ರಾಹುಲ್ ಮತ್ತು ಅಂಬಾಟಿ ರಾಯ್ಡು ಮೊದಲ ವಿಕೆಟ್‍ಗೆ 110 ರನ್‍ಗಳ ಜೊತೆಯಾಟ ನೀಡಿದ್ರು. ನಂತರ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ (44), ಎಂ.ಎಸ್.ಧೊನಿ (8), ಮನೀಶ್ ಪಾಂಡೆ(8),ಕೇದಾರ್ ಜಾಧವ್(19) ಗಳಿಸಿದ್ರು.
ಕೊನೆಯಲ್ಲಿ ದೀಪಕ್ ಚಹರ್ 12, ಕುಲ್‍ದೀಪ್ ಯಾದವ್ (9),ಸಿದ್ದಾರ್ಥ್ ಕೌಲ್(0), ಖಲೀಲ್ ಅಹ್ಮದ್ (1). ಕೊನೆಯ ವರೆಗೂ ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ ರಶೀದ್ ಖಾನ್ ಅವರ ಕೊನೆಯ ಓವರ್‍ನಲ್ಲಿ ಎಡವಿದ್ರು. ರಶೀದ್ ಅವರ ಕೊನೆಯ ಎಸೆತದಲ್ಲಿ ಒಂದು ರನ್ ಬೇಕಿದ್ದಾಗ ರವೀಂದ್ರ ಜಡೇಜಾ ಮಿಡ್‍ವಿಕೆಟ್‍ನಲ್ಲಿದ್ದ ನಜಿಬುಲ್ಲಾಗೆ ಕ್ಯಾಚ್ ನೀಡಿ ಹೊರ ನಡೆದ್ರು. ಭಾರತ 49.5 ಓವರ್‍ಗಳಲ್ಲಿ 252 ರನ್‍ಗಳಿಗೆ ಆಲೌಟ್ ಆಯಿತು.
ಇದಕ್ಕೂ ಮುನ್ನ ಟಾಸ್ ಗೆದ್ದ ಅಫ್ಘಾನಿಸ್ತಾನ ತಂಡ ಆರಂಭಿಕ ಬ್ಯಾಟ್ಸ್‍ಮನ್ ಮೊಹ್ಮದ್ ಶೆಹಜಾದ್ (124) ಭರ್ಜರಿ ಶತಕ ಹಾಗೂ ಮೊಹ್ಮದ್ ನಬಿ (64) ಅವರ ಶತಕ ನೆರವಿನಿಂದ ನಿಗದಿತ ಓವರ್‍ನಲ್ಲಿ 8 ವಿಕೆಟ್ ನಷ್ಟಕ್ಕೆ 252 ರನ್ ಕಲೆ ಹಾಕಿತು.