ಭವಿಷ್ಯದತ್ತ ಹೆಜ್ಜೆ ಇಟ್ಟ ಬೆಂಗಳೂರಿನ ಬಿಬಿಎಂಪಿ ಶಾಲೆಗಳು: ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ 21 ನೇ ಶತಮಾನದ ಕಲಿಕಾ ಸೌಲಭ್ಯ

  • ಮೈಕ್ರೋಸಾಫ್ಟ್ ಮತ್ತು ಟೆಕ್ ಅವಂತ್-ಗಾರ್ಡೆ ಸಹಯೋಗದಲ್ಲಿ ಬಿಬಿಎಂಪಿಯಿಂದ `ಪ್ರಾಜೆಕ್ಟ್ ರೋಶಿನಿ’ ಪ್ರಾರಂಭ
  • ಬಿಬಿಎಂಪಿಯ ಎಲ್ಲಾ ಶಾಲೆಗಳಲ್ಲಿ ಈ ಯೋಜನೆಗೆ ಚಾಲನೆ
  • ಸದ್ಯದಲ್ಲೇ ಇದೇ ಪ್ರಪ್ರಥಮ ಬಾರಿಗೆ ರೋಶಿನಿ ಮೂಲಕ ವಿಶ್ವದರ್ಜೆಗೇರಲಿರುವ ಬಿಬಿಎಂಪಿ ಶಾಲೆಗಳು

ಬೆಂಗಳೂರು, ಸೆಪ್ಟಂಬರ್ 25, 2018: ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಸಹಯೋಗದಲ್ಲಿ ಮೈಕ್ರೋಸಾಫ್ಟ್ ಮತ್ತು ಟೆಕ್ ಅವಂತ್-ಗಾರ್ಡೆ ಪ್ರಾಜೆಕ್ಟ್ ಬಿಬಿಎಂಪಿ ರೋಶಿನಿ’ ಎಂಬ ವಿನೂತನವಾದ ಯೋಜನೆಯನ್ನು ಆರಂಭಿಸಿವೆ. ಈ ಯೋಜನೆಯ ಪ್ರಮುಖ ಉದ್ದೇಶವೆಂದರೆ ಎಂಎಎಸ್‍ಪಿ-ಪಿಆರ್‍ಒ ಕಾರ್ಯಕ್ರಮದಲ್ಲಿ ಮತ್ತು ರೋಶಿನಿ ಮೂಲಕ ಬಿಬಿಎಂಪಿ ಶಾಲೆಗಳನ್ನು ವಿಶ್ವದರ್ಜೆಯ ಶಿಕ್ಷಣ ಕೇಂದ್ರಗಳನ್ನಾಗಿ ರೂಪಾಂತರ ಮಾಡುವುದು.

ಬೆಂಗಳೂರು ನಗರದಲ್ಲಿರುವ ಬಿಬಿಎಂಪಿಯ ಎಲ್ಲಾ ಶಾಲೆಗಳಿಗೆ ಸದ್ಯದಲ್ಲಿಯೇ ಎಂಎಎಸ್‍ಪಿ (ಮೈಕ್ರೋಸಾಫ್ಟ್ ಆಸ್ಪೈರ್ ಸ್ಟೂಡೆಂಟ್ ಪ್ರೋಗ್ರಾಂ)ನೊಂದಿಗೆ ಕನೆಕ್ಟೆಡ್ ಲರ್ನಿಂಗ್ ಕಮ್ಯುನಿಟಿ’ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದು 21 ನೇ ಶತಮಾನದ ಕಲಿಕಾ ಸೌಲಭ್ಯವನ್ನು ಕಲ್ಪಿಸುತ್ತದೆ. ರೋಶಿನಿ’ ಸೋಶಿಯಲ್ ಸ್ಕೂಲಿಂಗ್ ಕರಿಕ್ಯುಲಂ ಪದ್ಧತಿಯಾಗಿದ್ದು, ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಇದರ ಮೂಲಕ ಹೊಸ ಮಟ್ಟದ ಕಲಿಕೆಯ ಜತೆ ಜತೆಯಲ್ಲೇ ಜೀವನದ ಪಾಠವನ್ನೂ ಕಲಿಯಲಿದ್ದಾರೆ. ಇಂತಹ ಕಲಿಕಾ ಪದ್ಧತಿಯನ್ನು ಸರ್ಕಾರಿ ಶಾಲೆಗಳಲ್ಲಿ ಅಳವಡಿಸುತ್ತಿರುವುದು ಇಡೀ ಜಗತ್ತಿನಲ್ಲಿ ಇದೇ ಮೊದಲು.

ಯೋಜನೆ ಬಗ್ಗೆ ಮಾತನಾಡಿದ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಬಿಬಿಎಂಪಿ ಶಾಲೆಗಳನ್ನು ಅತ್ಯಾಧುನಿಕಗೊಳಿಸುವುದು ನನ್ನ ದೃಷ್ಟಿಕೋನವಾಗಿತ್ತು. ಈ ಮೂಲಕ ಬಿಬಿಎಂಪಿ ಶಾಲೆಗಳು ಇತರೆ ಶಾಲೆಗಳಿಗೆ ಮಾದರಿಯಾಗಿರಬೇಕೆಂದು ನನ್ನ ಆಶಯವಾಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಸಮಾಜದ ಎಲ್ಲಾ ವರ್ಗದ ಮಕ್ಕಳು ಈ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವಂತಾಗಬೇಕು’’ ಎಂದರು.

ಈ ನಿಟ್ಟಿನಲ್ಲಿ ಬಿಬಿಎಂಪಿ ರೋಶಿನಿ ಎಂಬ ಸಾಮಾಜಿಕ ಕಲಿಕಾ ವ್ಯವಸ್ಥೆಯು ಕ್ಯಾಂಪಸ್, ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ನಡುವೆ ಒಂದು ಕಲಿಕಾ ಪರಿಸರವನ್ನು ಉಂಟುಮಾಡುತ್ತದೆ. ಈ ಯೋಜನೆ ಶಿಕ್ಷಣದ ಒಂದು ಹೊಸ ಶಕೆಯನ್ನು ಆರಂಭವಾಗಲು ಸಹಕಾರಿಯಾಗುತ್ತದೆ. ಜೀವನ, ಕೆಲಸ ಮತ್ತು ಜ್ಞಾನಾಧಾರಿತ ಆರ್ಥಿಕತೆ ಬೆಳೆಯಲು ಪ್ರಾಯೋಗಿಕ ಅನುಭವಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ರೋಶಿನಿ ಯೋಜನೆ ಪೂರಕವಾಗಿದೆ’’ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಬಿಬಿಎಂಪಿ ರೋಶಿನಿ ಯೋಜನೆ ಒಂದು ಕಲಿಕೆಯ ಸಮೂಹಕ್ಕೆ ಸಂಬಂಧಿಸಿದ್ದಾಗಿದ್ದು, ಇದೊಂದು ಸಾಮಾಜಿಕ ಶಾಲಾ ಪಠ್ಯಕ್ರಮವಾಗಿದೆ. ಇದು ವಿದ್ಯಾರ್ಥಿಗಳಿಗೆ ಹೊಸ ಕಲಿಕೆಯ ಅನುಭವವನ್ನು ನೀಡಲಿದೆ. ಈ ಪ್ರಾಜೆಕ್ಟ್ ಬಿಬಿಎಂಪಿ ರೋಶಿನಿ ಹಿಂದಿನ ಉದ್ದೇಶ ವಿದ್ಯಾರ್ಥಿಗಳು ಭವಿಷ್ಯಕ್ಕೆ ಸಿದ್ಧರಿರುವಂತೆ’ ಮಾಡುತ್ತದೆ. ಯಾವುದೇ ವಿದ್ಯಾರ್ಥಿ ಅಥವಾ ಮಗುವೂ ಹಿಂದೆ ಬೀಳದಂತೆ’ ನೋಡಿಕೊಳ್ಳುವುದು, ಆರ್ಥಿಕವಾಗಿ ಹಿಂದುಳಿದ ಕುಟುಂಬ ಎಂಬ ಕಾರಣ ಮಕ್ಕಳ ಭವಿಷ್ಯಕ್ಕೆ ಮತ್ತು ಕಲಿಕೆಗೆ ಅಡ್ಡಿ ಬಾರದಂತೆ ನೋಡಿಕೊಳ್ಳುವುದು, ಗುಣಮಟ್ಟದಲ ಕಲಿಕೆ ಮತ್ತು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದಾಗಿದೆ. ಪಠ್ಯಕ್ರಮ ಆಧಾರಿತ ಶಿಕ್ಷಣದ ಜತೆಜತೆಯಲ್ಲಿಯೇ ಕ್ರೀಡೆ, ಕಲೆ, ಸ್ಪೇಸ್ ಸೈನ್ಸ್, ಪಾರಂಪರಿಕ, ವಿಶ್ವದ ಸಂಸ್ಕøತಿಗಳು, ಪರಿಸರ ಸೇರಿದಂತೆ ಮತ್ತಿತರೆ ವಿಚಾರಗಳ ಬಗ್ಗೆ ಪಠ್ಯೇತರ ಕಲಿಕೆಯನ್ನೂ ಈ ಯೋಜನೆ ಹೊಂದಿದೆ. ಅತ್ಯುತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಕಲ್ಪಿಸುವುದು, ಶಿಕ್ಷಕರಿಗೆ 21 ನೇ ಶತಮಾನದ ಕೌಶಲ್ಯಗಳ ತರಬೇತಿ ನೀಡುವುದು, ಅನುಭವ ಆಧಾರಿತ ಕಲಿಕೆಯಲ್ಲಿ ಸಮುದಾಯವನ್ನು ಭಾಗಿ ಮಾಡುವುದು ಸೇರಿದಂತೆ ಇನ್ನೂ ಹಲವಾರು ಚಟುವಟಿಕೆಗಳನ್ನು ಅಳವಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಉಪಮುಖ್ಯಮಂತಿಗಳ್ರು, ಗೃಹ ಸಚಿವರು, ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಯುವಜನ ಸೇವೆ, ಕ್ರೀಡಾ ಸಚಿವರೂ ಆಗಿರುವ ಶ್ರೀ ಡಾ.ಜಿ.ಪರಮೇಶ್ವರ್ ಅವರು, ಬೆಂಗಳೂರಿನಲ್ಲಿ ನಾವು ಸದ್ಯದಲ್ಲಿಯೇ ವಿಶ್ವದರ್ಜೆಯ ಸರ್ಕಾರಿ ಶಾಲೆಗಳನ್ನು ಹೊಂದುತ್ತಿರುವುದಕ್ಕೆ ಹೆಮ್ಮೆ ಮತ್ತು ಸಂತಸವೆನಿಸುತ್ತಿದೆ. ಇಲ್ಲಿ 21 ನೇ ಶತಮಾನದ ಕಲಿಕೆಯನ್ನು ಆರಂಭಿಸಲಿದ್ದು, ಬಿಬಿಎಂಪಿಯ ಎಲ್ಲಾ ಶಾಲೆಗಳಲ್ಲಿ ಜ್ಞಾನದ ಹೊಸ ಯುಗಾರಂಭವಾಗಲಿದೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಟೆಕ್ ಅವಾಂತ್-ಗಾರ್ಡೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಲಿ ಸೇಠ್ ಅವರು ಮಾತನಾಡಿ, 21 ನೇ ಶತಮಾನದಲ್ಲಿ ಶಿಕ್ಷಣ ಪದ್ಧತಿಯನ್ನು ಪುನರ್‍ರೂಪಿಸುವ ಅಗತ್ಯವಿದೆ. ಈ ಹಿಂದಿನಿಂದಲೂ ಕಲ್ಪಿಸಲಾಗುತ್ತಿರುವ ಮೂಲಸೌಕರ್ಯಗಳನ್ನು ಭವಿಷ್ಯತ್ತಿಗೆ ಪೂರಕವಾಗಿ ರೂಪಿಸಬೇಕಾಗಿದೆ. ಇವು ತಂತ್ರಜ್ಞಾನ ಆಧಾರಿತವಾಗಿರಬೇಕಿದ್ದು, ಈ ಮೂಲಸೌಕರ್ಯಗಳ ಮೂಲಕ ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಕಲಿಕಾ ಕ್ರಮವನ್ನು ಹೊಂದಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಹೊಸ ಯುಗದ ತಂತ್ರಜ್ಞಾನವನ್ನು ಬಿಬಿಎಂಪಿ ಶಾಲೆಗಳಲ್ಲಿ ಅನುಷ್ಠಾನಕ್ಕೆ ತರಲು ಕರ್ನಾಟಕ ಸರ್ಕಾರದೊಂದಿಗೆ ಸಹಯೋಗ ಹೊಂದುತ್ತಿರುವುದು ಸಂತಸ ತಂದಿದೆ’’ ಎಂದು ತಿಳಿಸಿದರು.

ಬಿಬಿಎಂಪಿಯ ಎಲ್ಲಾ ಶಾಲೆಗಳು ಸದ್ಯದಲ್ಲಿಯೇ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಹೊಂದಲಿವೆ. ಇದರಲ್ಲಿ ಪ್ರಮುಖವಾಗಿ ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಶಿನ್ ಲರ್ನಿಂಗ್, ಸ್ಟೆಮ್ ಅಂಡ್ ಸ್ಟೀಮ್ (ರೊಬೋಟಿಕ್ಸ್), ಕ್ಲೌಡ್, ಐಒಟಿ ಸೇರಿದಂತೆ ಇನ್ನೂ ಹಲವಾರು ವಿನೂತನವಾದ ತಂತ್ರಜ್ಞಾನಗಳನ್ನು ಹೊಂದಲಿವೆ. ಈ ತಂತ್ರಜ್ಞಾನವಲ್ಲದೇ, ಪರಿಸರ, ಸಾಂಸ್ಕøತಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಮೌಲ್ಯಾಧಾರಿತ ಕಲಿಕಾ ಕ್ರಮವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಜ್ಞಾನ ವೃದ್ಧಿ ಮಾಡಲಾಗುತ್ತದೆ.

ಈ ಯೋಜನೆಯ ಅನುಷ್ಠಾನದ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಶಾಲೆಗಳಲ್ಲಿನ ಶಿಕ್ಷಕರು, ವಿದ್ಯಾರ್ಥಿಗಳು, ಮೂಲಸೌಕರ್ಯಗಳು ಸೇರಿದಂತೆ ಇನ್ನಿತರೆ ಅಂಶಗಳ ಸಮೀಕ್ಷೆಯನ್ನು ನಡೆಸಲಾಗಿದೆ. ಸಲಹಾ ಸಮಿತಿ, ವ್ಯವಸ್ಥಾಪನಾ ಮಂಡಳಿ ಮತ್ತು ಆಡಳಿತ ಮಂಡಳಿ ರಚನೆ ಪ್ರಕ್ರಿಯೆ ಚಾಲನೆಯಲ್ಲಿದೆ. ಇದರೊಟ್ಟಿಗೆ ಶಿಕ್ಷಕರಿಗೆ 21 ನೇ ಶತಮಾನದ ಕಲಿಕಾ ತರಬೇತಿಯೂ ಆರಂಭವಾಗಿದೆ.

ಪ್ರಾಜೆಕ್ಟ್ ಬಿಬಿಎಂಪಿ ರೋಶಿನಿ ಕುರಿತು:

ಈ ಯೋಜನೆಗೆ ಬೆಂಬಲ ನೀಡುತ್ತಿರುವ ಸಂಸ್ಥೆಗಳು:
• ಮೈಕ್ರೋಸಾಫ್ಟ್- ವಿಂಡೋಸ್, ಮೈಕ್ರೋಸಾಫ್ಟ್ ಆಫೀಸ್, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಒ365, ಶಾಲಾ ಕೊಠಡಿಯಲ್ಲಿ ಸ್ಕೈಪ್, ಒನ್ ನೋಟ್, 5 ಸಿಎಸ್‍ನಲ್ಲಿ ಲರ್ನಿಂಗ್ ಆ್ಯಪ್ಸ್, ಟೀಚರ್ ಟ್ರೈನಿಂಗ್ ಅಂಡ್ ಸರ್ಟಿಫಿಕೇಷನ್, ಸ್ಟೂಡೆಂಟ್ ಟ್ರೈನಿಂಗ್ ಅಂಡ್ ಡಿವೈಸಸ್ ಸೇವೆಗಳನ್ನು ಒದಗಿಸಲಿದೆ.
• ಲೈಸೀ ಕಾರ್ಪ್- ಲೈಸೀ- ಸೈಬರ್ ಅಕಾಡೆಮಿ ಸಮುದಾಯ ಆಧಾರಿತ ಕಲಿಕಾ ಸಾಫ್ಟ್‍ವೇರ್ ಪೂರೈಕೆದಾರ
• ಅರಾರತ್-ಶಾಲೆಗಳು, ಶಿಕ್ಷಕರು ಮತ್ತು ಬೆಂಬಲಿತ ಸಿಬ್ಬಂದಿಯ ಲೆಕ್ಕಪರಿಶೋಧನೆ
• ನಾಲೆಜ್ ಕೀ ಫೌಂಡೇಷನ್- ಶಿಕ್ಷಣ ಕ್ಷೇತ್ರದ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲಿದೆ.
• ಒಡಿನ್- ಲರ್ನಿಂಗ್ ಮ್ಯಾನೇಜ್‍ಮೆಂಟ್ ಸಿಸ್ಟಂ
• ಟೆಕ್ ಬಾರ್- ಹಾರ್ಡ್‍ವೇರ್ ಅಂಡ್ ಟ್ಯಾಬ್ಲೆಟ್
• ಟೆಕ್ ಅವಂತ್-ಗಾರ್ಡೆ- ತರಬೇತಿ, ಅನುಷ್ಠಾನ ಮತ್ತು ಬೆಂಬಲ
• ದೂರದರ್ಶನ- ಕಂಟೆಂಟ್ ಡೆಲಿವರಿ ಪಾಟ್ರ್ನರ್
• ಕ್ವಾಲಿಟಿ ಕೌನ್ಸಿಲ್ ಇಂಡಿಯಾ- ಶಾಲೆ, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಯ ಮೌಲ್ಯಮಾಪನ ಮಾಡುವುದು.

About Tech Avant:

Tech Avant-Garde (TAG) is a technology services organization which focuses on “Product Fostering” which means Development, Nurturing and Promoting of the software products. Being a socially conscious organization, Tech Avant  has taken the cause of  “ quality education “ and “women empowerment ” in the digital age, wherein  we  train  teachers, students and  women.

For editorial enquiries contact jayas@prhub (9742260425) and sanjay@prhub.com

(9632387860)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ