
ನವದೆಹಲಿ: ಮುಂದುವರಿಯುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿರುವ ಏಷ್ಯಾ ಖಂಡದ ಪ್ರಮುಖ ದೇಶ ಭಾರತ. ಭಾರತದಲ್ಲಿ ನಿರುದ್ಯೋಗ ಸಮಸ್ಯೆಯ ಪ್ರಮಾಣ ಹೆಚ್ಚಾಗಿದೆ. ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿ ಭಾರತೀಯ ಉದ್ಯೋಗಸ್ಥರ ಮೇಲೆ ಬೆಳಕು ಚೆಲ್ಲಿದೆ.
2018ರ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ವರದಿಯ ಪ್ರಕಾರ ಶೇ. 77.5ರಷ್ಟು ಭಾರತೀಯರ ಉದ್ಯೋಗ ದುರ್ಬಲವಾಗಿದೆ ಎಂದು ಹೇಳಿದೆ. ಜಾಗತಿಕವಾಗಿ ಈ ಪ್ರಮಾಣ ಶೇ. 42,5ರಷ್ಟಿದ್ದು, ಭಾರತದ ಪ್ರಮಾಣ ತುಸು ಅಧಿಕವಾಗಿದೆ.
2017ರ ವರದಿ ಪ್ರಕಾರ ಜಾಗತಿಕವಾಗಿ 1.4 ಬಿಲಿಯನ್ ಉದ್ಯೋಗಸ್ಥರು ತಮ್ಮ ಅರ್ಹತೆಗಿಂತ ಕೆಳಮಟ್ಟದ ಉದ್ಯೋಗದಲ್ಲಿದ್ದಾರೆ. ಈ ವರ್ಷ ಇದು ಇನ್ನೂ 17 ಲಕ್ಷ ಅಧಿಕವಾಗಲಿದೆಯಂತೆ.
ದುರ್ಬಲ ಉದ್ಯೋಗವನ್ನು ಆದಾಯ, ಕಡಿಮೆ ಉತ್ಪಾದನೆ ಹಾಗೂ ಕಾರ್ಯಸ್ಥಳದ ಅಧಿಕ ಒತ್ತಡವನ್ನು ಪರಿಗಣಿಸಿ ವರದಿ ಸಿದ್ಧಪಡಿಸಲಾಗಿದೆ.