ಬೆಂಗಳೂರು,ಸೆ.25- ಫ್ಲೆಕ್ಸ್, ರಸ್ತೆ ಗುಂಡಿಗಳ ಬಗ್ಗೆ ಕೆಂಡ ಕಾರಿರುವ ಹೈಕೋರ್ಟ್ ಈಗ ಬೆಂಗಳೂರಿನ ಕಸದ ಸಮಸ್ಯೆ ಬಗ್ಗೆ ಹೈಕೋರ್ಟ್ ಚಿತ್ತಹರಿಸಿದೆ.
ರಾಜಧಾನಿ ಬೆಂಗಳೂರಿನಾದ್ಯಂತ ರಾರಾಜಿಸುತ್ತಿದ್ದ ಅಕ್ರಮ ಫ್ಲೆಕ್ಸ್ಗಳನ್ನು ತೆರವುಗೊಳಿಸಲು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಲು ಖಡಕ್ ಆದೇಶ ನೀಡಿದ್ದ ನ್ಯಾಯಾಲಯ ಈಗ ಬೆಂಗಳೂರಿನ ಕಸದ ಸಮಸ್ಯೆಯನ್ನು ಮುಕ್ತಗೊಳಿಸಲು ಮುಂದಾಗಿದೆ.
ರಾಜಕಾಲುವೆ ಒತ್ತುವರಿಯಿಂದ ಹಾಗೂ ಮಳೆಯಿಂದಾಗಿ ರಾಜಕಾಲುವೆಗಳು ಕಸದಿಂದ ತುಂಬಿ ಸಮಸ್ಯೆಗಳು ಉಂಟಾಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮತ್ತು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ವಿಭಾಗೀಯ ಪೀಠ ಈ ಬಗ್ಗೆ ಖುದ್ದು ಹಾಜರಾಗಿ ವಿವರ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿತು.
ಈ ಹಿನ್ನೆಲೆಯಲ್ಲಿ ಇಂದು ಕೋರ್ಟ್ಗೆ ಹಾಜರಾದ ಮುಖ್ಯ ಕಾರ್ಯದರ್ಶಿ ಅವರು ನ್ಯಾಯಾಲಯಕ್ಕೆ ವಿವರಣೆ ನೀಡಿದರು.
ವಿಚಾರಣಾ ಸಂದರ್ಭದಲ್ಲಿ ಫ್ಲೆಕ್ಸ್, ರಸ್ತೆಗುಂಡಿ ಸಮಸ್ಯೆಯಾಯ್ತು. ಈಗ ಕಸದ ಸಮಸ್ಯೆಯೇ ಏನು ಮಾಡುತ್ತಿದೆ ಬಿಬಿಎಂಪಿ, ಸರ್ಕಾರ, ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಛಾಟಿ ಬೀಸಿದೆ.