
ನವದೆಹಲಿ: ಇದುವರೆವಿಗೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಲಾಗದವರಿಗೆ ಸಂತಸದ ಸುದ್ದಿ ಇದೆ. ಸರ್ಕಾರ 2017-18ರ ಆರ್ಥಿಕ ವರ್ಷದ ಆಡಿಟ್ ವರದಿ ಸಲ್ಲಿಕೆಯ ಗಡುವನ್ನು ಅಕ್ಟೋಬರ್ 15ರವರೆಗೆ ವಿಸ್ತರಿಸಿದೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್ (ಸಿಬಿಡಿಟಿ) ತೆರಿಗೆದಾರ ಆದಾಯ ಸಲ್ಲಿಕೆಯ ಕೊನೆ ದಿನಾಂಕದ ಬಳಿಕ ಆಡಿಟ್ ಮಾಡಬೇಕಾಗುತ್ತದೆ. ಆದರೆ ತೆರಿಗೆದಾರರು ಯಾರು ಐಟಿ ರಿಟರ್ನ್ಸ್ ಸಲ್ಲಿಕೆಗೆ ಬಯಸುವರೋ ಅವರು ಅಂತಿಮ ಗಡುವಿನ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದರು.
ಐಟಿಆರ್ ಎಸ್ ಸಲ್ಲಿಕೆ ಮತ್ತು ಆಡಿಟ್ ವರದಿಗಳು (ನಿರ್ದಿಷ್ಟಪಡಿಸಿದ ದಿನಾಂಕದಿಂದ ಸಲ್ಲಿಸಬೇಕಾದ ಅಗತ್ಯ ವರದಿ) ಸಲ್ಲಿಕೆಗೆ ಅಂತಿಮ ಗಡುವನ್ನು ಸೆಪ್ಟೆಂಬರ್ 30 ರಿಂದ 2018 ರ ಅಕ್ಟೋಬರ್ 15, 2018 ಕ್ಕೆ ವಿಸ್ತರಿಸಿದೆ ಎಂದು ಸಿಬಿಡಿಟಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಹಿಂದೆ ಸಿಬಿಡಿಟಿ ಬಿಡುಗಡೆ ಮಾಡಿದ್ದ ಅಂಕಿ ಅಂಶದ ಆಧಾರದಲ್ಲಿ ಆಗಸ್ಟ್ 31 ರವರೆಗೆ ಶೇ.71 ಅಥವಾ 5.42 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದೆ.