ನಿವೃತ್ತ ಯೋಧರಿಗೆ ಅವಾಜ್; ಪೊಲೀಸರಿಂದ ನಟ ದುನಿಯಾ ವಿಜಯ್ ಬಂಧನ, ಇಂದು ಜಾಮೀನು ಡೌಟ್

ಬೆಂಗಳೂರು: ಅಪಹರಣ ಮತ್ತು ಹಲ್ಲೆಗೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅವರನ್ನು ಹೈಗ್ರೌಂಡ್ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ಮತ್ತೊಂದು ದುನಿಯಾ ವಿಜಯ್ ನ ದರ್ಪ ಬೆಳಕಿಗೆ ಬಂದಿದೆ.

ದುನಿಯಾ ವಿಜಯ್ ಅವರು ನಿವೃತ್ತ ಯೋಧ ವೆಂಕಟೇಶ್ ಅವರಿಗೆ ಅವಾಜ್ ಹಾಕಿ, ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ದುನಿಯಾ ವಿಜಯ್ ಬಾಮೈದ ಕಿರಣ್ ಅನ್ನೋರು ನಿವೃತ್ತ ಯೋಧ ವೆಂಕಟೇಶ್ ಬಳಿ ನಾಲ್ಕು ಲಕ್ಷ ಹಣ ತಗೊಂಡಿದ್ದರು. ಹಣ ಕೊಡದೇ ಕಿರಣ್ ಸತಾಯಿಸುತ್ತಿದ್ದನು. ಈ ವಿಚಾರವನ್ನು ಯೋಧ ವೆಂಕಟೇಶ್ ಅವರು ದುನಿಯಾ ವಿಜಿಯ್ ಗೆ ತಿಳಿಸಲು ಹೋಗಿದ್ದರು. ಈ ವೇಳೆ ಏಕಾಏಕಿ ಯೋಧ ವೆಂಕಟೇಶ್ ಗೆ ಕಾಲಿನಿಂದ ಒದಿಯಲು ಯತ್ನಿಸಿದ್ದರು. ಇನ್ನೊಂದು ಸಾರಿ ನನ್ನ ಮನೆ ಬಾಗಿಲಿಗೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಕೂಡ ಒಡ್ಡಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಪ್ರತಿಕ್ರಿಸಿಯಿಸಿದ ಯೋಧ ವೆಂಕಟೇಶ್, ದುನಿಯಾ ವಿಜಿ ಅವರ ಬಾಮೈದ ನನ್ನ ಬಳಿಯಿಂದ ಸುಮಾರು 4.3 ಲಕ್ಷ ರೂ ಹಣ ಪಡೆದುಕೊಂಡಿದ್ದು, ಆರು ತಿಂಗಳಾದರು ಅದನ್ನು ವಾಪಸ್ ಕೊಡಲಿಲ್ಲ. ನಂತರ ಅವರ ಮನೆಗ ಹೋಗಿ ಮಾತನಾಡಿದಾಗ ನಮ್ಮ ಸಂಬಂಧ ವಿಜಿಯ ಬಳಿ ಮಾತನಾಡಿದ್ದೇನೆ. ನಿಮ್ಮ ಹಣವನ್ನು ಕೊಡುತ್ತೇನೆ ಎಂದು ಹೇಳಿದ್ದರು.

ನಾನು ಒಂದು ತಿಂಗಳು ಕಾದೆ, ಆದರೆ ಹಣವನ್ನು ಕೊಡಲಿಲ್ಲ. ಒಂದು ದಿನ ಜಿಮ್ ಬಳಿ ಹೋಗಿ ವಿಜಯ್ ಅವರನ್ನು ಮಾತನಾಡಿಸಿದೆ. ಆಗ ಅವರು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದರು. ಅಷ್ಟೇ ಅಲ್ಲದೇ ನನ್ನ ಮಗನ ಮೇಲೆ ಹಲ್ಲೆ ಮಾಡುತ್ತೇನೆ. ಮತ್ತೆ ಅವರ ಮನೆಯ ಬಳಿ ಹೋಗಬಾದರು ಎಂದು ಬೆದರಿಕೆ ಹಾಕಿದರು. ಆದ್ದರಿಂದ ನಾನು ಜೀವಭಯದಿಂದ ಹಣವನ್ನೂ ವಾಪಸ್ ಕೇಳದೆ, ಪೊಲೀಸರಿಗೂ ದೂರು ನೀಡದೇ ಸುಮ್ಮನಾಗಿದ್ದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

ಇಂದು ದುನಿಯ ವಿಜಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದುನಿಯ ವಿಜಯ್ ನನಗೂ ಸಂಬಂಧವಿಲ್ಲ. ಅವರು ನನ್ನ ಬಳಿ ಹಣ ಪಡೆದುಕೊಂಡಿಲ್ಲ. ಅವರ ಸಂಬಂಧಿ ಪಡೆದುಕೊಂಡಿದ್ದ ಹಣವನ್ನು ವಾಪಸ್ ಕೇಳಲು ಹೋಗಿದ್ದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ದರಿಂದ ನನಗೂ ನ್ಯಾಯ ಸಿಗುತ್ತದೆ ಎಂದು ದುನಿಯಾ ವಿಜಯ್ ದರ್ಪ ನೋಡಿ ಮತ್ತೆ ದೂರು ನೀಡಲು ನಿರ್ಧಾರ ಮಾಡಿದ್ದೇನೆ ಎಂದು ಯೋಧ ಅವರು ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ