ಜೆ ಡಿ ಎಸ್ ಶಾಸಕಾಂಗ ಸಭೆಗೆ ಹಾಸನದಲ್ಲಿ ಮುನ್ನುಡಿ

ಹಾಸನ: ಆಪರೇಷನ್ ಕಮಲದ ಭೀತಿಯಿಂದ ಕೊಂಚ ವಿಚಲಿತರಾಗಿರುವ ಜೆ ಡಿ ಎಸ್ ನಾಯಕರು ಇದೆ ಮೊದಲ ಬಾರಿಗೆ ಹಾಸನದಲ್ಲಿ ರೆಸಾರ್ಟ್ ರಾಜಕಾರಣ ಹಾಗೂ ಶಾಸಕಾಂಗ ಸಭೆಗೆ ಮುನ್ನುಡಿ ಬರೆದಿದೆ.

ಸಾಕಷ್ಟು ಕುತೂಹಲ ಮೂಡಿಸಿರುವ ಈ ರೆಸಾರ್ಟ್ ರಾಜಕೀಯದ ಸಭೆ ರಾಜ್ಯ ರಾಜಕೀಯವನ್ನೇ ತಲ್ಲಣಗೊಳಿಸಿದೆ. ಪಕ್ಷದ ಉಳುವಿಗಾಗಿ 37 ಶಾಸಕರ ಒಗ್ಗಟ್ಟಿನ ಪ್ರದರ್ಶನ ಇಂದು ನಡೆಯಲಿದೆ. ಹಾಸನದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈಗಾಗಲೇ ವೇದಿಕೆ ಸಜ್ಜುಗೊಂಡಿದೆ.

ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಸಭೆ ನಡೆಯಲಿದ್ದು ಈಗಾಗಲೇ ಹಾಸನಕ್ಕೆ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಆಗಮಿಸಿದ್ದು, ಅವರ ಅಧ್ಯಕ್ಷತೆಯಲ್ಲಿ ಸರಿ ಸುಮಾರು ರಾತ್ರಿ 8 ಗಂಟೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ. ಇನ್ನು ಚಿಕ್ಕಮಗಳೂರಿನಿಂದ ಸಿಎಂ ಕುಮಾರಸ್ವಾಮಿ ಹಾಸನ ಕ್ಕೆ ಆಗಮಿಸಲಿದ್ದಾರೆ.
ಬಿಜೆಪಿ ಆಪರೇಷನ್‌ ಕಮಲಕ್ಕೆ ಮುಂದಾಗಿದ್ದರಿಂದ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಈ ಸಭೆಯ ಪ್ರಮುಖ ಉದ್ದೇಶವಾಗಿದೆ.
ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನವನ್ನ ವಿಫಲಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುತ್ತದೆ. ಪ್ರಚಲಿತ ರಾಜಕೀಯ ವಿದ್ಯಮಾನ, ಪರಿಷತ್‌ ಉಪಚುನಾವಣೆ ಅಭ್ಯರ್ಥಿ, ಸಮಸ್ಯೆಗಳ ಬಗ್ಗೆ ಶಾಸಕರ ಜತೆ ಚರ್ಚೆ ನಡೆಸುವ ಜೊತೆಗೆ, ಲೋಕಸಭೆ ಚುನಾವಣೆ ತಯಾರಿ ಕುರಿತೂ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳುವ ಈ ಸಂಜೆ ಪತ್ರಿಕೆಗೆ ತಿಳಿಸಿವೆ.

ಡೊಂಟ್ ಕೇರ್:
ಕುಮಾರಸ್ವಾಮಿ ಹೇಳಿಕೆಯನ್ನ ರಾಜಕೀಯ ಅಸ್ತ್ರವಾಗಿ ಬಿಜೆಪಿ ಬಳಸುತ್ತಿದೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದವರು ಕಳೆದು ಕಳೆದ ಮೂರು ತಿಂಗಳಿಂದ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿರುವುದನ್ನು ನಾನು ನೋಡುತ್ತಲೇ ಬಂದಿದ್ದೇನೆ ಎನ್ನುವ ಮೂಲಕ ಡೋಂಟ್ ಕೇರ್ ಎಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ.

ಇನ್ನು ಸಂಜೆ ನಡೆಯುವ ಇಂದಿನ ಜೆಡಿಎಸ್ ಶಾಸಕಾಂಗ ಸಭೆಗೆ ವಿಶೇಷ ಅರ್ಥ ಕಲ್ಪಿಸುವುದು ಬೇಕಿಲ್ಲ. ಹಾಸನ ಜಿಲ್ಲೆಗಳಲ್ಲಿ ನಮ್ಮ ಶಾಸಕರು ಹೆಚ್ಚಾಗಿದ್ದಾರೆ. ಹಾಗಾಗಿ ಅವರು ಬಂದು ಹೋಗಲು ಅನುಕೂಲವಾಗಲೆಂದು ಹಾಸನದಲ್ಲಿ ನಿಗದಿಗೊಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ