ಇಸ್ಲಾಮಾಬಾದ್: ಭಾರತ-ಪಾಕ್ ವಿದೇಶಾಂಗ ಸಚಿವರ ದ್ವಿಪಕ್ಷೀಯ ಮಾತುಕತೆಯನ್ನು ರದ್ದುಗೊಳಿಸಿರುವ ಬಗ್ಗೆ ಪಾಕಿಸ್ತನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಭಾರತ ಮತ್ತೊಂದು ಅವಕಾಶವನ್ನು ಕೈಚೆಲ್ಲಿದೆ. ಮಾತುಕತೆ ರದ್ದುಗೊಳಿಸುವುದಕ್ಕೆ ಭಾರತ ನೀಡಿರುವ ಕಾರಣಗಳು ಸಮರ್ಪಕವಾಗಿಲ್ಲ. ಬಿಎಸ್ ಎಫ್ ಯೋಧರ ಹತ್ಯೆ ಹಿಂದೆ ನಮ್ಮ ಕೈವಾಡವೇನೂ ಇಲ್ಲ ಎಂದು ಪಾಕಿಸ್ತಾನ ಹೇಳಿದೆ.
ಕಾಶ್ಮೀರದಲ್ಲಿ ಪಾಕ್ ಬೆಂಬಲಿತ ಉಗ್ರರ ಸಮಸ್ಯೆ ಉಲ್ಬಣವಾಗುತ್ತಿದ್ದು, ಪೊಲೀಸರನ್ನು ಉಗ್ರರು ಹತ್ಯೆ ಮಾಡಿದ ಬೆನ್ನಲ್ಲೆ ಭಾರತ, ಪಾಕಿಸ್ತಾನದೊಂದಿಗಿನ ಮಾತುಕತೆಯನ್ನು ರದ್ದುಗೊಳಿಸಿತ್ತು. ಭಾರತ ಮಾತುಕತೆ ರದ್ದುಗೊಳಿಸುವುದಕ್ಕೆ ಕಾರಣ ಎಂದು ಹೇಳಲಾಗುತ್ತಿರುವ ಘಟನೆಗಳು, ಭಾರತ ಮಾತುಕತೆಗೆ ಒಪ್ಪಿಗೆ ಸೂಚಿಸುವ ಮುನ್ನವೇ ನಡೆದಿರುವ ಘಟನೆಗಳಾಗಿವೆ ಆದರೆ ಭಾರತ ಮತ್ತೊಮ್ಮೆ ಮಾತುಕತೆ ನಿರಾಕರಿಸುವ ಮೂಲಕ ಮತ್ತೊಂದು ಅವಕಾಶವನ್ನು ಕೈಚೆಲ್ಲಿದೆ, ಇದರಿಂದ ಪಾಕಿಸ್ತಾನಕ್ಕೆ ತೀವ್ರ ಬೇಸರ ಉಂಟಾಗಿದೆ ಎಂದು ಪಾಕ್ ಸರ್ಕಾರ ಹೇಳಿದೆ.