
ಬೆಂಗಳೂರು: ಕಳೆದ ಒಂದು ವಾರದ ಹಿಂದೆ ಬೆಳಗಾವಿ ರಾಜಕಾರಣ ಸಮ್ಮಿಶ್ರ ಸರ್ಕಾರದ ಕೇಂದ್ರ ಬಿಂದುವಾಗಿತ್ತು. ಜಾರಕಿಹೊಳಿ ಸಹೋದರರ ಬಂಡಾಯ ತಣ್ಣಾಗುತ್ತಲೇ ಬಿಜೆಪಿ ಆಪರೇಷನ್ ಕಮಲದಿಂದ ಹಿಂದೆ ಸರಿದಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಒಂದು ಬಿಜೆಪಿ ನಾಯಕರು ಮಾತ್ರ ನಾಳೆ ಅಥವಾ ನಾಡಿದ್ದು ಸರ್ಕಾರ ಪತನವಾಗುತ್ತೆ ಎಂದು ಭವಿಷ್ಯವನ್ನು ನುಡಿಯುತ್ತಿದ್ದಾರೆ. ಇತ್ತ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ನಾವು ಐದು ವರ್ಷ ಆಡಳಿತ ನಡೆಸುತ್ತೇವೆ ಅಂತಾ ಭರವಸೆ ವ್ಯಕ್ತಪಡಿಸುತ್ತಿದ್ದಾರೆ. ಈಗ ಮತ್ತೆ ಬಿಜೆಪಿ ತೆರೆಮರೆಯಲ್ಲಿ ಸರ್ಕಾರ ಉಳಿಸಲು ಬ್ರಹ್ಮಾಸ್ತ್ರ ಸಿದ್ಧಪಡಿಸಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಉರುಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆಯಂತೆ. ಮೂರು ಸ್ಕೆಚ್ ಮೂಲಕ ಒಂದು ಗೇಮ್ ಆಡಲು ಬಿಜೆಪಿ ನಾಯಕರು ಮುಂದಾದ್ರಾ ಎನ್ನುವ ಪ್ರಶ್ನೆಗಳು ರಾಜಕೀಯ ಅಂಗಳದಲ್ಲಿ ಹುಟ್ಟಿಕೊಂಡಿವೆ. ಹಾಗಾದ್ರೆ ಬಿಜೆಪಿ ರಚಿಸಿದೆ ಎನ್ನಲಾಗುವ ಮೂರು ಪ್ಲಾನ್ ಗಳೇನು? ಇಲ್ಲಿದೆ ಮಾಹಿತಿ.
ಪ್ಲಾನ್ ನಂಬರ್ 1: ಸೈಲೆಂಟ್ ಆಪರೇಷನ್ ಕಮಲ
– ಗಮನವನ್ನು ಬೇರೆ ಕಡೆ ಸೆಳೆದು ಆಪರೇಷನ್ ಕಮಲ ಚುರುಕುಗೊಳಿಸುವುದು.
– ಕಾಂಗ್ರೆಸ್ ಅಸಮಾಧಾನಿತರ ಜೊತೆ ನಿರಂತರ ಸಂಪರ್ಕ ಸಾಧಿಸುವುದು.
– ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯನ್ನ ಕಾದುನೋಡಿ ಬಂಡೆದ್ದವರಿಗೆ ಆಪರೇಷನ್ ಮಾಡುವುದು.
– ವಿಧಾನ ಪರಿಷತ್ ಚುನಾವಣೆಯಲ್ಲಿ ಕೈ ಪಾಳೇಯದ ಅಸಮಾಧಾನಿತರಿಂದ ಗೇಮ್ ಆಡಿಸೋದು
ಪ್ಲಾನ್ ನಂಬರ್ 2: ದಂಗೆ ಅಸ್ತ್ರ ಗವರ್ನರ್ ಅಂಗಳದ ಆಟ
– ಹೆಚ್‍ಡಿಕೆ ದಂಗೆ ಹೇಳಿಕೆಯೇ ಬಿಜೆಪಿಗೆ ಪ್ರಧಾನ ಅಸ್ತ್ರ.
– ರಾಜಭವನದ ಕದತಟ್ಟುವುದು, ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸೋದು.
– ದಂಗೆ ಹೇಳಿಕೆ ಪ್ರಸ್ತಾಪಿಸಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತಾ ಅಖಾಡಕ್ಕೆ ಇಳಿಯುವುದು.
– ರಾಜ್ಯಪಾಲರ ಮಧ್ಯಪ್ರವೇಶದ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಗುನ್ನಾ ಹೊಡೆಯೋದು.
ಪ್ಲಾನ್ ನಂಬರ್ 3: ರಾಷ್ಟ್ರಪತಿ ಆಳ್ವಿಕೆ, ವಿಧಾನಸಭೆ ಅಮಾನತು ಅಸ್ತ್ರ
– ಕಾನೂನು ಸುವ್ಯವಸ್ಥೆ, ಶಾಸಕರ ಖರೀದಿ ಗಲಾಟೆಯನ್ನೇ ಮುಂದಿಡೋದು
– ಇದರ ನೆಪದಲ್ಲಿ ಸದ್ಯದ ಮಟ್ಟಿಗೆ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರೋದು
– ಲೋಕಸಭೆ ಚುನಾವಣೆ ಮುಗಿಯುವ ತನಕ ರಾಜ್ಯ ವಿಧಾನಸಭೆಯನ್ನ ಅಮಾನತಿನಲ್ಲಿ ಇಡೋದು
– ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ರಚನೆಗೆ ಯತ್ನಿಸೋದು