ಅಬುದಾಬಿ: ರಶೀದ್ ಖಾನ್ ಅವರ ಆಲ್ರೌಂಡ್ ಆಟದ ನೆರವಿನಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 136 ರನ್ಗಳ ಭರ್ಜರಿ ಗೆಲುವು ದಾಖಲಿಸಿ ಸೂಪರ್ 4 ರೌಂಡ್ಗೆ ಲಗ್ಗೆ ಇಟ್ಟಿತ್ತು.
ಗುರುವಾರ ಅಬುದಾಬಿಯಲ್ಲಿ ನಡೆದ ಏಷ್ಯಾಕಪ್ನ ಲೀಗ್ನ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹಶಮತುಲ್ಲಾ (58) ಮತ್ತು ರಶೀದ್ ಖಾನ್ (ಅಜೇಯ 57)ಅವರ ಅರ್ಧ ಶತಕಗಳ ನೆರವಿನಿಂದ ಆಪ್ಘಾನಿಸ್ತಾನ ತಂಡ ನಿಗದಿತ 50 ಓವರ್ಗಳಲ್ಲಿ 255 ರನ್ ಗಳಿಸಿತು. ಬಾಂಗ್ಲಾ ಪರ ಶಕೀಬ್ ಅಲ್ ಹಸನ್ 42 ರನ್ ನೀಡಿ ನಾಲ್ಕು ವಿಕೆಟ್ ಪಡೆದರು
266 ರನ್ಗಳ ಸವಾಲಿನ ಮೊತ್ತ ಬೆನ್ನತ್ತಿದ ಬಾಂಗ್ಲಾದೇಶ ಆರಂಭಿಕ ಆಘಾತಗಳ ಆಘಾತ ಅನುಭವಿಸಿ ಒತ್ತಡಕ್ಕೆ ಸಿಲುಕಿತು.ತಂಡದ ಅನುಭವಿ ಬ್ಯಾಟ್ಸ್ಮನ್ ಶಕೀಬ್ ಅಲ್ ಹಸನ್ (32), ಮೊಹ್ಮದುಲ್ಲಾ (27), ಮೊಸೆಡೆಕ್ ಹುಸೇನ್(26) ರನ್ಗಳನ್ನ ಬಾರಿಸಿದ್ದು ಬಿಟ್ಟರೆ ತಂಡದ ಎಲ್ಲ ಬ್ಯಾಟ್ಸ ಮನ್ಗಳು ಒಂದಂಕಿ ರನ್ ಬಾರಿಸಿ ಪೆವಿಲಿಯನ್ ಸೇರಿದ್ರು.ಕೊನೆಯಲ್ಲಿ ಬಾಂಗ್ಲಾ 42.1 ಓವರ್ಗಳಲ್ಲಿ 119 ರನ್ಗಳಿಗೆ ಆಲೌಟ್ ಆಯಿತು. ಆಫ್ಘಾನ್ ಪರ ರಶೀದ್,ಮುಜೀಬ್ ಮತ್ತು ಗುಲಾಬಿದ್ದಿನ್ ನಬಿ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು.