ದುಬೈ:ಏಷ್ಯಾಕಪ್ನ ಟೀಂ ಇಂಡಿಯಾ ತನ್ನ ಬದ್ಧ ವೈರಿ ಪಾಕಿಸ್ತಾನ ತಂಡವನ್ನ 8 ವಿಕೆಟ್ಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿ ಸಂಭ್ರಮಿಸಿತು.ಇತ್ತ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾವನ್ನ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲು ಹೋಗಿ ತಾನೆ ನಗೆಪಾಟಲೀಕ್ಕಿಡಾಗಿದೆ.
ಪಂದ್ಯಕ್ಕೂ ಮುನ್ನ ತನ್ನ ತಂಡದ ಸಾಧನೆಯನ್ನ ಹೊಗಳಲು ಹೋಗಿ ಯಡವಟ್ಟೊಂದನ್ನ ಮಾಡಿಕೊಂಡಿದೆ. ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಕದನದ ವಿಡಿಯೊವೊಂದನ್ನ ಟ್ವಿಟರ್ನಲ್ಲಿ ಶೇರ್ ಮಾಡಿ ಟೀಂ ಇಂಡಿಯಾವನನ್ ಕೆನಕಲು ಪ್ಲಾನ್ ಮಾಡಿಕೊಂಡಿತ್ತು. ಆದ್ರೆ ತಾನೆ ತೋಡಿದ ಹಳ್ಳಕ್ಕೆ ಬೀಳುತ್ತೇನೆ ಅನ್ನೋದು ಗೊತ್ತೆ ಇರಲಿಲ್ಲ ಟ್ವಿಟರ್ನಲ್ಲಿ Happened ಎಂದು ಬರೆಯುವ ಬದಲಿಗೆ Hepoened ಎಂದು ಬರೆದು ಸ್ಪೆಲ್ಲಿಂಗ್ ಮಿಸ್ಟೇಕ್ ಮಾಡಿ ಟ್ವಿಟಗರಿಂದ ಬಾಯಿದೆ ಬಂದಂತೆ ಬಯಿಸಿಕೊಂಡಿದೆ.
ಪಿಸಿಬಿಯ ಈ ಯಡವಟ್ಟಿಗೆ ಟೀಂ ಇಂಡಿಯಾದ ಆಲ್ರೌಂಡರ್
ರವೀಂದ್ರ ಜಡೇಜಾ ಕಾಲೆಳದಿದ್ದಾರೆ. This “hapoens” to be Pakistan Cricket Team’s official Twitter account ಎಂದು ತಮ್ಮ ಟ್ವಿಟರ್ನಲ್ಲಿ ಬರೆದಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಿಸಿಬಿಯನ್ನ ಸಖತ್ತಾಗಿ ಕಿಚಾಯಿಸಿದ್ದಾರೆ.