ಪಾಕ್ ವಿರುದ್ದ ಟೀಂ ಇಂಡಿಯಾ ಜಯಭೇರಿ

ದುಬೈ: ಪ್ರತಿಷ್ಠಿತ ಏಷ್ಯಾಕಪ್‍ನ ಲೀಗ್‍ನ ಎ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 8 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ.
163 ರನ್‍ಗಳ ಸವಾಲನ್ನ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ನಾಯಕ ರೋಹಿತ್ ಶರ್ಮಾ (52) ಮತ್ತು ಶಿಖರ್ ಧವನ್ ಒಳ್ಳೆಯ ಆರಂಭ ನೀಡಿ ಮೊದಲ ವಿಕೆಟ್‍ಗೆ 86 ರನ್‍ಗಳ ಜೊತೆಯಾಟ ನೀಡಿದ್ರು. ನಂತರ ಬಂದ ಬಂದ ಅಂಬಟಿ ರಾಯ್ಡು ಮತ್ತು ದಿನೇಶ್ ಕಾರ್ತಿಕ್ ತಲಾ ಅಜೇಯ 31 ರನ್ ಗಳಿಸಿ ತಂಡವನ್ನೆ ಗೆಲುವಿನ ದಡ ಸೇರಿಸಿದ್ರು. ಭಾರತ 29 ಓವರ್‍ಗಳಲ್ಲಿ 2 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ ಅಮೋಘ ಗೆಲುವು ಪಡೆಯಿತು.
ಇದಕ್ಕು ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ತಂಡ ಆರಂಭಿಕ ಆಘಾತ ಅನುಭವಿಸಿತು. ಸ್ವಿಂಗ್ ಮಾಸ್ಟರ್ ಭುವನೇಶ್ವರ್ ಕುಮಾರ್ ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಇಮಾಮ್ –ಉಲ್-ಹಕ್ ಮತ್ತು ಫಾಕರ್ ಝುಮಾನ್ ವಿಕೆಟ್ ಪಡೆದು ಮಿಂಚಿದ್ರು. ತಂಡದ ಅನುಭವಿ ಬ್ಯಾಟ್ಸ್ ಮನ್ ಶೋಯೆಬ್ ಮಲ್ಲಿಕ್ (43), ಬಾಬರ್ ಅಜಾಮ್(47) ರನ್‍ಗಳಿಸಿ ಚೆತರಿಕೆಯ ಆಟ ಪ್ರದರ್ಶಿಸಿದ್ರು.
ನಂತರ ತಂಡದ ಅರೆ ಕಾಲಿಕ ಬೌಲರ್ ಕೇದಾರ್ ಜಾಧವ್ ನಾಯಕ ಸರ್ಫ್‍ರಾಜ್ ಅಹ್ಮದ್, ಅಸೀಫ್ ಅಲಿ ಮತ್ತು ಶಧಾಬ್ ಖಾನ್ ವಿಕೆಟ್‍ಗಳನ್ನ ಪಡೆದು ಪಾಕ್ ತಂಡದ ಮಧ್ಯಮ ಕ್ರಮಾಂಕವನ್ನ ಬುಡಮೇಲು ಮಾಡಿದ್ರು. ಕೊನೆಯಲ್ಲಿ ಪಾಕಿಸ್ತಾನ ತಂಡ 43.1 ಓವರ್‍ಗಳಲ್ಲಿ 162 ರನ್‍ಗಳಿಗೆ ಆಲೌಟ್ ಆಗಿತ್ತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ತಂಡ 162/10 (43.1 ಒವರ್)
ಬಾಬರ್ ಅಜಮ್ 47, ಶೋಯೆಬ್ ಮಲ್ಲಿಕ್ 43
ಭುವನೇಶ್ವರ್ ಕುಮಾರ್ 15ಕ್ಕೆ 3,ಕೇದಾರ್ ಜಾಧವ್ 23ಕ್ಕೆ3
ಟೀಂ ಇಂಡಿಯಾ
ರೋಹಿತ್ ಶರ್ಮಾ 52, ಶಿಖರ್ ಧವನ್ 46
ಶಾದಾಬ್ ಖಾನ್ 6ಕ್ಕೆ1, ಫಾಹಿಮ್ ಆಸ್ರಫ್ 31ಕ್ಕೆ 1

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ