ಬೆಂಗಳೂರು: ಚರಣದಾಸಿ ಮತ್ತು ನಾ ನಿನ್ನ ಬಿಡಲಾರೆ ಖ್ಯಾತಿಯ ಕಿರುತೆರೆ ನಟಿ ಕಾವ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ತಮ್ಮ ಬಹು ದಿನಗಳ ಗೆಳೆಯ ಮಹದೇವ್ ಅವರನ್ನು ಇತ್ತೀಚೆಗೆ ವಿವಾಹವಾಗಿದ್ದಾರೆ.
ಕನ್ನಡ ಕಿರುತೆರೆ ನಟಿ ಕಾವ್ಯ ಕೆಲ ದಿನಗಳ ಹಿಂದೆ ತಮ್ಮ ಗೆಳೆಯ ಮಹದೇವ್ ಅವರ ಜೊತೆ ಸಪ್ತಪದಿ ತುಳಿದಿದ್ದು, ತಮ್ಮ ಮದುವೆ ಫೋಟೋಗಳನ್ನು ತನ್ನ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಕಾವ್ಯ ಮತ್ತು ಮಹದೇವ್ ಏಳು ವರ್ಷದಿಂದ ಸ್ನೇಹಿತರಾಗಿದ್ದು, ಬಳಿಕ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ಬಗ್ಗೆ ಇಬ್ಬರ ಮನೆಯಲ್ಲಿ ತಿಳಿಸಿದ್ದಾರೆ. ಎರಡು ಕುಟುಂಬದವರು ಒಪ್ಪಿ ಆಗಸ್ಟ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿದ್ದರು. ಇದೀಗ ಗುರು ಹಿರಿಯರು ನಿಶ್ಚಯದಂತೆ ಈ ಜೋಡಿ ದಾಪಂತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದೆ.
ಈ ಬಗ್ಗೆ ನಟಿ ಕಾವ್ಯ ಅವರು ಫೋಟೋವನ್ನು ಹಾಕಿ ‘ಏಳು ವರ್ಷದ ಸ್ನೇಹ, ಪ್ರೀತಿಗೆ ಬಾಂದವ್ಯ ಈಗ ಇನ್ನಷ್ಟು ಬಲಶಾಲಿಯಾಗಿದ್ದು, ಮುಂದುವರಿಯುತ್ತಿದೆ’ ಎಂದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಕಾವ್ಯ ಅವರು ಫೋಟೋ ಪೋಸ್ಟ್ ಮಾಡಿದ ಬಳಿಕ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಕಾವ್ಯ ಖಾಸಗಿ ವಾಹಿಯಲ್ಲಿ ಪ್ರಸಾರ ಆಗುತ್ತಿದ್ದ ‘ಚರಣದಾಸಿ’ ಧಾರಾವಾಹಿಯಲ್ಲಿ ಲೀಡ್ ರೋಲ್ ನಲ್ಲಿ ಅಭಿನಯಿಸಿದ್ದರು. ಬಳಿಕ ‘ನಾ ನಿನ್ನ ಬಿಡಲಾರೆ’ ಧಾರಾವಾಹಿನಿಯಲ್ಲೂ ಅಭಿನಯಿಸಿದ್ದರು.