ವಾಷಿಂಗ್ಟನ್: ಭಾರತ ಮತ್ತು ಆಫ್ಘಾನಿಸ್ತಾನಗಳಲ್ಲಿ ಭಯೋತ್ಪಾದಕ ಕೃತ್ಯವೆಸಗಲು ಪಾಕಿಸ್ತಾನ ಪ್ರಾಯೋಜಿತ ಉಗ್ರರು ಗಂಭೀರ ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ವರದಿ ನೀಡಿದೆ.
ಆಪ್ಘಾನಿಸ್ತಾನದ ಅಲ್ ಖೈದ್, ಪಾಕಿಸ್ತಾನ ಮೂಲದ ಲಷ್ಕರ್ ಇ ತೊಯ್ಬಾ, ಜೈಷ್ ಇ ಮೊಮಹದ್ ಉಗ್ರ ಸಂಘಟನೆಗಳು ಈ ಬಗ್ಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಭಯೋತ್ಪಾದಕ ಕೃತ್ಯವೆಸಗಲು ಪಾಕಿಸ್ತಾನ ನೆರೆವನ್ನು ನೀಡುತ್ತಿದ್ದು, ಇದಕ್ಕಾಗಿ ಪಾಕಿಸ್ತಾನದ ರಹಸ್ಯ ಪ್ರದೇಶಗಳಲ್ಲಿ ಉಗ್ರರಿಗೆ ಬಹಿರಂಗವಾಗಿಯೇ ತರಬೇತಿ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2017ಕ್ಕಿಂತ ಮುಂಚಿನಿಂದಲೂ ಪಾಕಿಸ್ತಾನ ಉಗ್ರರ ತಾಲೀಮಿಗೆ ವೇದಿಕೆಯಾಗಿದ್ದು, ಅಮೆರಿಕ ಎಚ್ಚರಿಕೆಯ ಹೊರತಾಗಿಯೂ ಉಗ್ರ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಾಕಿಸ್ತಾನದ ಕುಗ್ರಾಮಗಳಲ್ಲಿ ಇಂದಿಗೂ ಉಗ್ರ ತರಬೇತಿ ಕೇಂದ್ರ ಎಗ್ಗಿಲ್ಲದೆ ಸಾಗಿದ್ದು, ಪಾಕಿಸ್ತಾನ ಮೂಲಭೂತವಾದಿಗಳು ಸ್ಥಳೀಯ ಯುವಕರ ತಲೆ ಕೆಡಿಸಿ ಅವರಿಗೆ ಉಗ್ರ ತರಬೇತಿ ನೀಡುತ್ತಿದ್ದಾರೆ ಎಂದು ಅಮೆರಿಕ ಗುಪ್ತಚರ ಇಲಾಖೆ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.