ಅನಂತು v/s ನುಸ್ರತ್ , ಜಡ್ಜ್ ಮತ್ತು ವಕೀಲ ನಡುವಿನ ಪ್ರೇಮ ಕಥೆ !

ಸುಧೀರ್ ಶಾನುಭೋಗ್ ನಿರ್ದೇಶನದ ಚೊಚ್ಚಲ ಚಿತ್ರ ಅನಂತು v/s ನುಸ್ರತ್ ,ಟೀಸರ್ ವೀಕ್ಷಕರ  ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ವಿನಯ್ ಕುಮಾರ್ ವಕೀಲ ಅನಂತ ಕೃಷ್ಣ ಕ್ರಮದಾರಿತ್ಯನ  ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ.
ಜಡ್ಜ್ ನುಸ್ರತ್  ಪಾತಿಮಾ ಬೇಗ್ ಪಾತ್ರದಲ್ಲಿ ಲತಾ ಹೆಗ್ಡೆ ಅಭಿನಯಿಸಿದ್ದಾರೆ. ಇದೊಂದು ಹಾಸ್ಯ ಪ್ರೇಮ ಕಥೆಯಧಾರಿತ ಚಿತ್ರವಾಗಿದ್ದು,  ಚಿತ್ರದ ಟೀಸರ್ ಕೂಡಾ ಅನಂತು ಮತ್ತು ನುಸ್ರತ್ ನಡುವಿನ ಪ್ರೇಮಕಥೆಯನ್ನು ಹೇಳುತ್ತದೆ. ಪಾತ್ರಗಳು ಹಾಗೂ ಘಟನೆಗಳನ್ನು ಕುತೂಹಲದಿಂದ  ಜೋಡಿಸಿ ನಿರ್ದೇಶಕರು ಚಿತ್ರ ಮಾಡಿದಂತಿದೆ.
ಮಾಣಿಕ್ಯ ಪ್ರೊಡಕ್ಷನ್ ನಡಿಯಲ್ಲಿ   ತಯಾರಾಗಿರುವ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ರವಿಶಂಕರ್, ಗುರು ಪ್ರಸಾದ್, ಭಗವಾನ್ ಮತ್ತಿತರ ತಾರಾಗಣವಿದೆ. ಅಭಿಷೇಕ್ ಕಾಸರಗೊಡು  ಅವರ ಛಾಯಾಗ್ರಹಣವಿದ್ದು,  ಸುನಾದ್ ಗೌತಮ್ ಸಂಗೀತ ಸಂಯೋಜಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ