ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಹಿಂದಿ ಸ್ಯಾಟಲೈಟ್ ರೈಟ್ಸ್ ಬರೋಬ್ಬರಿ 5.5 ಕೋಟಿ ರುಪಾಯಿಗೆ ಸೇಲ್ ಆಗಿದೆ.
ಎ ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಚಿತ್ರ ಕೌಟುಂಬಿಕ ಮತ್ತು ಭರ್ಜರಿ ಫೈಟ್ಸ್ ನಿಂದ ಕೂಡಿದ್ದು ಈ ಹಿನ್ನೆಲೆಯಲ್ಲಿ ಚಿತ್ರ ಭಾರೀ ರೈಟ್ಸ್ ಗೆ ಸೇಲಾಗಿದೆ.
ಚಿತ್ರ ಚಿನ್ನಾಂಬಿಕ ಪ್ರೊಡೇಕ್ಷನ್ ಅಡಿಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಹಿಂದಿ ಆವೃತ್ತಿಯ ಸ್ಯಾಟಲೈಟ್ ರೈಟ್ಸ್ ಅನ್ನು ಆರ್ ಕೆ ದಗ್ಗಲ್ ಸ್ಟುಡಿಯೋ ಖರೀದಿಸಿದೆ.
ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು ಇನ್ನು ಎರಡು ಹಾಡುಗಳ ಚಿತ್ರೀಕರಣ ನಡೆಯಬೇಕಿದೆ. ಚಿತ್ರೀಕರಣ ಮುಕ್ತಾಯದ ಬಳಿಕ ಕೂಡಲೇ ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ.
ಚಿತ್ರದಲ್ಲಿ ನಿಖಿಲ್ ಗೆ ಜೋಡಿಯಾಗಿ ರಚಿತಾ ರಾಮ್ ಅಭಿನಯಿಸಿದ್ದು ಶರತ್ ಕುಮಾರ್, ಬಾಲಿವುಡ್ ನ ಮಾಧೂ, ರವಿಶಂಕರ್, ಚಿಕ್ಕಣ್ಣ ಚಿತ್ರದಲ್ಲಿ ಅಭಿನಯಿಸಿದ್ದಾರೆ.