ಬೆಂಗಳೂರು,ಸೆ.19- ಸಂಸ್ಕøತ ವಿಶ್ವವಿದ್ಯಾಲಯ ಮೊಟ್ಟ ಮೊದಲ ಐತಿಹಾಸಿಕ ಸಂಶೋಧನಾ ಕೇಂದ್ರವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ಕರ್ನಾಟಕ ಸಂಸ್ಕøತ ವಿವಿಯ ನೂತನ ಕಟ್ಟಡಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಶೋಧನಾ ಕೇಂದ್ರ ನಾಥ ಪಂಥ, ವೀರಶೈವ ದರ್ಶನ ಸೇರಿದಂತೆ ಎರಡು ಬಗೆಯ ದೈವ ದರ್ಶನದ ಸಂಶೋಧನಾ ಮತ್ತು ಅಧ್ಯಯನವನ್ನು ಕೈಗೊಳ್ಳುವ ಮೂಲಕ ದೇಶದಲ್ಲೇ ಮೊದಲ ಐತಿಹಾಸಿಕ ಸಂಶೋಧನಾ ಕೇಂದ್ರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದg+ು.
ವಿದೇಶಿಗರು ಸಂಸ್ಕøತ ಭಾಷೆ ಅಧ್ಯಯನದ ಕಡೆ ಮನಸ್ಸು ಮಾಡುತ್ತಿದ್ದಾರೆ. ಆದರೆ ನಾವು ಮರೆಯುತ್ತಿದ್ದೇವೆ. ಕಣ್ಣಿದ್ದು ಕುರುಡರಾಗಿದ್ದೇವೆ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.
ಸಂಸ್ಕøತ ಅತ್ಯಂತ ಪುರಾತನ ಭಾಷೆಯಾಗಿದ್ದು ಎಲ್ಲ ಭಾಷೆಗಳ ಜನನಿಯಾಗಿದೆ. ದ್ರಾವಿಡ ಭಾಷೆಗಳು ಸಂಸ್ಕøತ ಭಾಷೆಯಿಂದ ಪ್ರಭಾವಗೊಂಡಿವೆ. ವಿಜ್ಞಾನಿ ಐನ್ಸ್ಟೈನ್ರ ಸಾಪೇಕ್ಷ ಸಿದ್ದಾಂತಕ್ಕೆ ಸಂಸ್ಕøತವೇ ಪ್ರೇರಣೆ ಎಂದು ಹೇಳಿದರು.
ಶ್ರದ್ಧೆ ಮೂಡಿಸಿ:
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಂಸ್ಕøತಿಯ ಬಗ್ಗೆ ಶ್ರದ್ಧೆ ಮೂಡಿಸಬೇಕಾಗಿದೆ. ಜ್ಞಾನದ ಸಂಪತ್ತಾಗಿರುವ ಸಂಸ್ಕøತ ಭಾಷೆಯನ್ನು ಹೆಚ್ಚು ಬೆಳೆಸಬೇಕಿದೆ. ಗಣಕಯಂತ್ರಕ್ಕೆ ಹೊಂದಿಕೊಳ್ಳುವ ಭಾಷೆ ಸಂಸ್ಕøತವಾಗಿದ್ದು, ಬಡವರಿಗೆ ಮಾತ್ರ ಸಂಸ್ಕøತ ಹೇಳಿಕೊಡುವುದಲ್ಲ. ಉಳ್ಳವರಿಗೂ ಸಂಸ್ಕøತವನ್ನು ಕಲಿಸಬೇಕಾಗಿದೆ. ಎಲ್ಲಾ ಭಾಷೆ ಮಾತೃಸ್ಥಾನದಲ್ಲಿ ಸಂಸ್ಕøತವಿದೆ ಎಂದರು.
ಗುರುಕುಲಗಳಲ್ಲೇ ಸಂಸ್ಕøತ ಕಲಿಯಬೇಕೆಂಬ ಭಾವನೆ ಬೇಡ. ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳು ಕಾಣುವಂತೆ ವ್ಯಕ್ತಿಯ ವ್ಯಕ್ತಿತ್ವ ಏರಬೇಕು ಎಂದು ಹೇಳಿದರು.
ಕುದೂರು ಬಳಿ ಸಂಸ್ಕøತ ವಿವಿಗೆ 100 ಎಕರೆ ಜಾಗ ನೀಡಲಾಗಿದ್ದು, ನಳಂದ ವಿವಿಯಂತೆ ಉತ್ತಮ ವಿಶ್ವವಿದ್ಯಾಲಯವಾಗಲಿ ಎಂದು ಶ್ರೀಗಳು ಆಶಿಸಿದರು.
ಪೂರ್ವಾಗ್ರಹದಿಂದ ಭಗವದ್ಗೀತೆ ಸುಡಲಾಗಿದೆ:
ಉಡುಪಿಯ ಪೇಜಾವರ ಮಠಾಧೀಶರಾದ ವಿಶ್ವೇಶ್ವರ ತೀರ್ಥ ಶ್ರೀ ಪಾದಂಗಳವರು ಮಾತನಾಡಿ, ಪೂರ್ವಗ್ರಹದಿಂದಾಗಿ ಭಗವದ್ಗೀತೆ ಸುಡುವ ಕಾರ್ಯ ನಡೆದಿದೆ. ಮಾನವನಿಗೆ ಹಾನಿಕಾರಕ ಸಂದೇಶ ಅದರಲ್ಲಿಲ್ಲ. ಭವದ್ಗಿತೆ ಬಗ್ಗೆ ತಪ್ಪು ಗ್ರಹಿಕೆ ಬೇಡ ಎಂದರು.
ಸಂಸ್ಕøತ ಭಾಷೆ ಯಾವುದೇ ಒಂದು ಗುಂಪಿಗೆ ಸೀಮಿತವಲ್ಲ. ಎಲ್ಲರ ಭಾಷೆಯಾಗಿ, ಎಲ್ಲ ರೀತಿಯಲ್ಲೂ ಬಳಸುವಂತಹ ಲೋಕ ಭಾಷೆಯಾಗಬೇಕು. ಪ್ರಾಚೀನ ಕಾಲದಲ್ಲಿ ಎಲ್ಲರೂ ಸಂಸ್ಕøತವನ್ನು ವ್ಯವಹಾರಿಕ ಭಾಷೆಯನ್ನಾಗಿ ಬಳಸುತ್ತಿದ್ದ ಬಗ್ಗೆ ನಿದರ್ಶನವಿದೆ ಎಂದು ಹೇಳಿದರು.
ಹಳೆ ಸಾಹಿತ್ಯ ಮತ್ತು ಹೊಸ ಸಾಹಿತ್ಯವೆಂಬ ಬೇಧ ಬೇಡ. ಎರಡೂ ಸಾಹಿತ್ಯಗಳಲ್ಲಿರುವ ಒಳ್ಳೆಯದನ್ನು ಸ್ವೀಕರಿಸುವ ಉದಾರ ಮನೋಭಾವ ಬೇಕು. ಪ್ರಾಚೀನ ಆಧ್ಯಾತ್ಮ, ಆಧುನಿಕ ವಿಜ್ಞಾನ ಎರಡೂ ಬೇಕಿದೆ ಎಂದು ಹೇಳಿದರು.
ಸಂಸ್ಕøತ ವಿವಿ ಕುಲಪತಿ ಪೆÇ್ರ.ಪದ್ಮಾಶೇಖರ್ ಮಾತನಾಡಿ, ಅಂತಾರಾಷ್ಟ್ರೀಯ ಸಂಸ್ಕøತ ಭಾಷಾ ಅಧ್ಯಯನ ಕೇಂದ್ರ ಸ್ಥಾಪಿಸಲು ಬೆಂಗಳೂರು ವಿವಿ ಆವರಣದಲ್ಲಿ 10 ಎಕರೆ ಜಮೀನು ನೀಡಬೇಕು, ವಿವಿಯೊಂದಿಗೆ ವಿಲೀನಗೊಂಡಿರುವ ಘಟಕ ಕಾಲೇಜುಗಳ ಬೋಧಕರಿಗೆ ಯುಜಿಸಿ ವೇತನ ಶ್ರೇಣಿ ನೀಡಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮಳೆ ಹಾನಿಗೆ ಒಳಗಾದ ಕೊಡಗಿನ ಸಂತ್ರಸ್ತರ ನೆರವಿಗೆ ಸಂಸ್ಕøತ ವಿಶ್ವವಿದ್ಯಾಲಯ ಕಾಲೇಜುಗಳ ಪ್ರಾಧ್ಯಾಪಕರ ವೇತನದಿಂದ 10.17 ಲಕ್ಷ ರೂ.ಗಳನ್ನು ದೇಣಿಗೆ ನೀಡಲಾಯಿತು.
ಸಂಸ್ಕøತ ವಿವಿಯ ಕುಲಸಚಿವೆ ಎಂ.ಶಿಲ್ಪಾ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.