ಸೆ.21ರಿಂದ 23ರವರೆಗೆ ಅಂತಾರಾಷ್ಟ್ರೀಯ ಸಸ್ಯಹಾರಿ ಆಹಾರ ಮೇಳ

Varta Mitra News

ಬೆಂಗಳೂರು,ಸೆ.19- ಅಂತಾರಾಷ್ಟ್ರೀಯ ಸಸ್ಯಹಾರಿ ಆಹಾರ ಮೇಳವನ್ನು ಸೆ.21ರಿಂದ 23ರವರೆಗೆ ಫ್ರೀಡಂಪಾಕ್‍ನಲ್ಲಿ ಬೆಳಗ್ಗೆ 11ರಿಂದ ರಾತ್ರಿ 8ವರೆಗೆ ನಡೆಯಲಿದೆ ಎಂದು ಮೇಳದ ಸಂಸ್ಥಾಪಕ ಅನಿಲ್ ಗುಪ್ತ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳದಲ್ಲಿ ದೆಹಲಿ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ 15 ರಾಜ್ಯಗಳು ಮಳಿಗೆಗಳನ್ನಿಡಲಿದ್ದಾರೆ. ಇಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಆಹಾರ ಬಗೆಗಳು ಲಭ್ಯವಿದೆ ಎಂದರು.

150 ಮಳಿಗೆಗಳನ್ನು ಇಡಲಾಗಿದ್ದು, ಸಾಮಾನ್ಯರಿಗೆ ಕೈ ಗೆಟ್ಟುವಂತೆ 20ರಿಂದ 150 ರೂ. ದರ ನಿಗದಿಪಡಿಸಲಾಗಿದೆ. ಈ ಮೇಳದ ವಿಶೇಷತೆ ಏನೆಂದರೆ ಬಾಳೆಕಾಯಿ ಬಿರಿಯಾನಿ, ಐಸ್‍ಕ್ರೀಮ್ ಬಿರಿಯಾನಿ,ಬ್ರಿಂಜಾಲ್ ಬಿರಿಯಾನಿ, ವಿಹಾರದ ಲಿಟಿಚೋಕ್ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಬಗೆಯ ವಿಶೇಷ ಆಹಾರವನ್ನು ಇಲ್ಲಿ ಸವಿಯಬಹುದಾಗಿದೆ ಎಂದು ತಿಳಿಸಿದರು.

ಈ ಮೇಳವನ್ನು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಮೇಳ ನಡೆಯಲಿದ್ದು, ಇದರಿಂದ ಬಂದ ಹಣವನ್ನು ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಲಾಗುವುದು ಎಂದು ಹೇಳಿದರು.
ಮೊದಲ ದಿನದಂದು ಮಧ್ಯಾಹ್ನ 12 ಗಂಟೆಗೆ ಐಸ್‍ಕ್ರೀಂ ತಿನ್ನುವ ಸ್ಪರ್ಧೆ ನಡೆಯಲಿದ್ದು, ಇದಕ್ಕೆ ಯವ ವಯಸ್ಸು ನಿಗದಪಡಿಸಿಲ್ಲ. ಇದರಲ್ಲಿ ಗೆಲ್ಲುವವರಿಗೆ ಸೂಕ್ತ ಬಹುಮಾನ ನೀಡುವುದಾಗಿ ತಿಳಿಸಿದರು.
ಈ ಮೇಳವನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಟಿ ಮೇಘನರಾಜ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ನಟ ಸಿಹಿಕಹಿ ಚಂದ್ರು,ನವೀನ್ ಸುರೇಶ್ ಸೇರಿದಂತೆ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ