ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶಿಸಿ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಈಗಾಗಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಯಶಸ್ವಿ 25 ನೇ ದಿನಗಳನ್ನು ಪೂರೈಸಿ, 50 ನೇ ದಿನದತ್ತ ಮುನ್ನುಗ್ಗುತ್ತಿದೆ.
ಇನ್ನು ಈ ಚಿತ್ರದ ಬಿಡುಗಡೆಗೂ ಮುನ್ನವೇ ಅವರ ಎರಡನೇ ಚಿತ್ರದ ಬಗ್ಗೆ ಸುದ್ದಿಯಾಗಿದೆ.ಮದಗಜ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ, ಮದಗಜ ಸಿನಿಮಾಗೆ ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಸಿನಿಮಾಗೆ ಯಾರು ಹೀರೋ ಎಂಬುದು ಎಲ್ಲರ ಪ್ರಶ್ನೆಯಾಗಿದೆ.,
ಆರಂಭದಲ್ಲಿ ಧ್ರುವಸರ್ಜಾ ಹೆಸರು ಕೇಳಿ ಬಂದಿತ್ತು. ಭರ್ಜರಿ ಸಿನಿಮಾದ 100ನೇ ದಿನದ ಸಂಭ್ರಮದಲ್ಲಿ ಕೂಡ ಘೋಷಿಸಲಾಗಿತ್ತು, ಆದರೆ ಧ್ರುವ ಸರ್ಜಾ ಉದಯ್ ಮೆಹ್ತಾ ಅವರ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ,
ಅಯೋಗ್ಯದಂತ ಹಿಟ್ ಸಿನಿಮಾ ಕೊಡಲು ಸಾಧ್ಯವಾಯಿತು. ಉದಯ್ ಮೆಹ್ತಾ ಮತ್ತು ಉಮಾಪತಿ ನಿರ್ಮಾಪಕರು ನನ್ನ ಜೊತೆ ಇದ್ದಾರೆ ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ, ಸದ್ಯ ನಾನು ಮದಗಜ ಸಿನಿಮಾ ಆರಂಭಿಸಲು ನಿರ್ಧರಿಸಿದ್ದೇನೆ, ಈ ಬಗ್ಗೆ ಧ್ರುವ ಸರ್ಜಾ ಅವರ ಜೊತೆ ಚರ್ಚಿಸಲಿದ್ದೇನೆ ಎಂದು ಹೇಳಿದ್ದಾರೆ. ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ, ಹಾಗಾಗಿ ಡೇಟ್ಸ್ ಹೊಂದಾಣಿಕೆ ಕಷ್ಟವಾಗುತ್ತಿದೆ. ಇದಕ್ಕೆ ಬೇರೆ ಪರಿಹಾರ ಹುಡುಕುತ್ತೇವೆ ಎಂದು ಮಹೇಶ್ ಹೇಳಿದ್ದಾರೆ.