ಅಫ್ಘಾನ್ ಗೆ ಶರಣಾದ ಸಿಂಹಳೀಯರು ಟೂರ್ನಿಯಿಂದಲೇ ಔಟ್

ಅಬುಧಾಬಿ: ಐದು ಬಾರಿ ಏಷ್ಯನ್ ಚಾಂಪಿಯನ್ ಶ್ರೀಲಂಕಾ ತಂಡ ಕ್ರಿಕೆಟ್ ಶಿಶು ಅಫ್ಘಾನಿಸ್ತಾನ ವಿರುದ್ಧ 91 ರನ್‍ಗಳ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರ ಬಿದ್ದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ತಂಡ ನಿಗದಿತ ಓವರ್‍ನಲ್ಲಿ 249 ರನ್‍ಗಳಿಗೆ ಆಲೌಟ್ ಆಯಿತು. ಆರಂಭಿಕರಾದ ಮೊಹ್ಮದ್ ಶೆಹಜಾದ್(34) ಮತ್ತು ಇಸಾನುಲ್ಲಾ (45) ಉತ್ತಮ ಆರಂಭ ನೀಡಿ ಮೊದಲ ವಿಕೆಟ್‍ಗೆ 57 ರನ್ ಸೇರಿಸಿದ್ರು. ನಂತರ ಮಧ್ಯಮ ಕ್ರಮಾಂಕದಲ್ಲಿ ರಹಮತ್ ಶಾ 72 ರನ್ ಬಾರಿಸಿ ತಂಡಕ್ಕೆ ಭಾರೀ ಮೊತ್ತ ಗಳಿಸಲು ನೆರವಾದ್ರು.
250 ರನ್‍ಗಳ ಸವಾಲಿನ ಮೊತ್ತ ಬೆನ್ನತ್ತಿದ ಶ್ರೀಲಂಕಾ ತಂಡ ಕುಶಾಲ್ ಮೆಂಡಿಸ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಉಪುಲ್ ತರಂಗಾ 36 ರನ್ ಗಳಿಸಿ ಬೇಗನೆ ಪೆವಿಲಿಯನ್ ಸೇರಿದ್ರು. ಮಧ್ಯಮ ಕ್ರಮಾಂಕದಲ್ಲಿ ಆಂಜಿಲೊ ಮ್ಯಾಥ್ಯೂಸ್ (22), ಜಯಸೂರ್ಯ (14), ತಿಸ್ಸಾರಾ ಪೆರೆರಾ (28) ರನ್‍ಗಳಿಸಿ ಔಟದ್ರು. ಕೊನೆಯಲ್ಲಿ ಶ್ರೀಲಂಕಾ 41.2 ಓವರ್‍ಗಳಲ್ಲಿ ಆಲೌಟ್ ಆಯಿತು. ಇದರೊಂದಿಗೆ ಅಫ್ಘಾನಿಸ್ತಾನ ತಂಡ ಸತತ ಎರಡು ಸೋಲುಗಳನ್ನ ಕಂಡು ಟೂರ್ನಿಯಿಂದಲೇ ಹೊರ ಬಿತ್ತು.
ಸಂಘಟಿತ ದಾಳಿ ಮಾಡಿದ ಮುಜೀಬ್ ಉರ್ ರೆಹಮಾನ್, ಗುಲಾಬ್ದಿನ್ ನೈಬ್, ಮೊಹ್ಮದ್ ನಬಿ ಮತ್ತು ರಶೀದ್ ಖಾನ್ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ