ತಮಿಳುನಾಡಿನ ರೈತನಿಗೆ ರಾಜ್ಯದ ಮಹಿಳೆಯ ಹೃದಯ ದಾನ

ಬೆಂಗಳೂರು, ಸೆ.17- ಅಪಘಾತಕ್ಕೀಡಾಗಿ ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಹೃದಯವನ್ನು ಕುಟುಂಬದವರ ಒಪ್ಪಿಗೆ ಮೇರೆಗೆ ಬನ್ನೇರುಘಟ್ಟ ರಸ್ತೆಯ ಫೆÇೀರ್ಟಿಸ್ ಆಸ್ಪತ್ರೆ ವೈದ್ಯರ ತಂಡ ತಮಿಳುನಾಡಿನ ಧರ್ಮಪುರಿಯರೈತನಿಗೆ ಅಳವಡಿಸುವ ಮೂಲಕ ಜೀವದಾನ ಮಾಡಿದೆ.
ಫೆÇೀರ್ಟಿಸ್ ಆಸ್ಪತ್ರೆಯ ಹೃದಯ ರಕ್ತನಾಳ ವಿಜ್ಞಾನ ವಿಭಾಗದ ಚೇರ್ಮನ್ ಹಾಗೂ ಮುಖ್ಯ ಹೃದಯ ಮತ್ತು ಎದೆಭಾಗದ ಡಾ.ವಿವೇಕ್ ಜವಳಿ ಮತ್ತು ಹೃದಯ ರಕ್ತನಾಳ ಮತ್ತು ಎದೆಭಾಗದ ಶಸ್ತ್ರಚಿಕಿತ್ಸಾ ತಜ್ಞ ಡಾ.ಪ್ರಿಯಾಂಕ್ ಭಟ್ ಅವರು ರೈತನಿಗೆ ಹೃದಯ ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಫೆÇೀರ್ಟಿಸ್ ಹೆಲ್ತ್‍ಕೇರ್ ಲಿಮಿಟೆಡ್ ಭಾರತದಲ್ಲಿ ಮುಂಚೂಣಿಯ ಸಮಗ್ರ ಆರೋಗ್ಯ ಶುಶ್ರೂಷೆ ವಿತರಣಾ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ.ಆಸ್ಪತ್ರೆಗಳು, ರೋಗನಿದಾನ, ಡೇ ಕೇರ್ ಮತ್ತು ವಿಶೇಷ ಸೌಲಭ್ಯಗಳನ್ನು ಸಂಸ್ಥೆಯ ಆರೋಗ್ಯ ಶುಶ್ರೂಷೆ ಸೇವೆಗಳು ಒಳಗೊಂಡಿವೆ.
ಪ್ರಸ್ತುತ ಸಂಸ್ಥೆ ಭಾರತ, ದುಬೈ, ಮಾರಿಷಸ್ ಮತ್ತು ಶ್ರೀಲಂಕಾಗಳಲ್ಲಿ ಆರೋಗ್ಯ ಶುಶ್ರೂಷೆ ಸೇವೆಗಳ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, 45 ಶುಶ್ರೂಷೆ ಸೌಲಭ್ಯಗಳನ್ನು ಹೊಂದಿದೆ. ಇವುಗಳಲ್ಲಿ ಸುಮಾರು 10,000 ಸಂಭಾವ್ಯ ಹಾಸಿಗೆಗಳು 368 ರೋಗನಿದಾನ ಕೇಂದ್ರಗಳು ಸೇರಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ