ಬೆಂಗಳೂರು, ಸೆ.12- ಅಪಾರ್ಟ್ಮೆಂಟ್ವೊಂದಕ್ಕೆ ನುಗ್ಗಿದ ಚೋರರು ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ವಾಸವಾಗಿದ್ದ ಫ್ಲಾಟ್ನ ಬೀಗ ಮುರಿದು ಒಳನುಗ್ಗಿ 500 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ಲೂಟಿ ಹಣವನ್ನು ಕಳ್ಳತನ ಮಾಡಿರುವ ಘಟನೆ ಸಂಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗಶೆಟ್ಟಿಹಳ್ಳಿಯ ಅಪಾರ್ಟ್ಮೆಂಟ್ವೊಂದರ ಫ್ಲಾಟ್ ನಂ.3ರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಪ್ರಸಾದ್ ಜಾದವ್ ಎಂಬುವವರು ವಾಸವಾಗಿದ್ದಾರೆ.
ನಿನ್ನೆ ಬೆಳಗ್ಗೆ ಇವರು 8 ಗಂಟೆಗೆ ಹೊರಗೆ ಹೋಗಿದ್ದರು. ಈ ವೇಳೆ ಕಳ್ಳರು ಇವರ ಫ್ಲಾಟ್ನ ಬೀಗ ಮುರಿದು ಒಳನುಗ್ಗಿ ಬೀರುವನ್ನು ಒಡೆದು 500 ಗ್ರಾಂ ಚಿನ್ನಾಭರಣ ಹಾಗೂ 20 ಸಾವಿರ ಹಣವನ್ನು ಕಳ್ಳತನ ಮಾಡಿದ್ದಾರೆ.
ರಾತ್ರಿ 8 ಗಂಟೆಗೆ ಪ್ರಸಾದ್ ಅವರು ಮನೆಗೆ ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಸಂಜಯನಗರ ಠಾಣೆ ಪೆÇಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ಅಪಾರ್ಟ್ಮೆಂಟ್ನ ಪಕ್ಕದ ಫ್ಲಾಟ್ವೊಂದರಲ್ಲೂ ಸಹ ಕಳ್ಳತನ ನಡೆದಿದೆ.