ಕೊನೆಯ ಪಂದ್ಯದಲ್ಲೂ ಟೀಂ ಇಂಡಿಯಾಕ್ಕೆ ಸೋಲು

LONDON, ENGLAND - SEPTEMBER 11: Joe Root of England holds aloft the Winner's Trophy during the Specsavers 5th Test - Day Five between England and India at The Kia Oval on September 11, 2018 in London, England. (Photo by Mike Hewitt/Getty Images)

ಓವೆಲ್: ಡ್ರಾ ಮಾಡಿಕೊಳ್ಳುವ ಅವಕಾಶವಿದ್ದರೂ ಅನಗತ್ಯ ತಪಪುಗಳನ್ನ ಮಾಡಿದ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಐದನೆ ಮತ್ತು ಅಂತಮ ಟೆಸ್ಟ್ ಪಂದ್ಯದಲ್ಲಿ 118 ರನ್‍ಗಳಿಂದ ಸೋಲು ಮೂಲಕ ಕೊನೆಯ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿತು.
ಈ ಗೆಲುವಿನೊಂದಿಗೆ ಜೋ ರೂಟ್ ಪಡೆ 4-1 ಅಂತರದಿಂದ ಸರಣಿ ಗೆದ್ದುಕೊಂಡಿತ್ತು. ಜೊತೆಗೆ ಕೊನೆಯ ಪಂದ್ಯದ ಗೆಲುವಿನ ಸಿಹಿಯನ್ನ ತಂಡದ ಅನುಭವಿ ಆಟಗಾರ ಆಲಿಸ್ಟರ್ ಕುಕ್‍ಗೆ ಅರ್ಪಿಸಿತು.
ಓವೆಲ್ ಅಂಗಳದಲ್ಲಿ ನಡೆದ ಐದನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುದುವರೆಸಿದ ಕೆ.ಎಲ್. ರಾಹುಲ್ ಮತ್ತು ಅಜಿಂಕ್ಯ ರಹಾನೆ ಆಂಗ್ಲರ ದಾಳಿಯನ್ನ ಸಮರ್ಥವಾಗಿ ಎದುರಿಸಿದರು. ಆದರೆ ಕೆಲವೇ ಹೊತ್ತಿನಲ್ಲಿ ಅಜಿಂಕ್ಯ ರಹಾನೆ 37 ರನ್‍ಗಳಿಸಿ ಔಟಾದ್ರು. ನಂತರ ಬಂದ ಹನುಮ ವಿಹಾರಿ ಡಕೌಟ್ ಆದ್ರು.
ರಾಹುಲ್- ಪಂತ್ ಶತಕದ ಜೊತೆಯಾಟ
6ನೇ ವಿಕೆಟ್‍ಗೆ ಜೊತೆಗೂಡಿದ ರಾಹುಲ್ ಜೊತೆಗೂಡಿದ ಪಂತ್ ಆಂಗ್ಲ ಬೌಲರ್‍ಗಳ ಬೆವರಿಳಿಸಿದ್ರು. ಇವರಿಬ್ಬರ ಶತಕದಾಟಕ್ಕೆ ಆಂಗ್ಲ ಬೌಲರ್‍ಗಳು ವಿಲಾ ವಿಲಾ ಒದ್ದಾಡಿದರು. ರಾಹುಲ್ 149 ರನ್‍ಗಳಾಗಿದ್ದಾಗ ಔಟಾದ್ರೆ ಪಂತ್ 114 ರನ್‍ಗಳಾಗಿದ್ದಾಗ ರಶೀದ್‍ಗೆ ಬಲಿಯಾದ್ರು. ಇಲ್ಲಿಗೆ ಟೀಂ ಇಂಡಿಯಾದ ಸೋಲು ಖಚಿತವಾಯಿತು.
ಕೊನೆಯಲ್ಲಿ ಬಂದ ರವೀಂದ್ರ ಜಡೇಜಾ 13, ಇಶಾಂತ್ ಶರ್ಮಾ 5, ಮೊಹ್ಮದ್ ಶಮಿ 0 ರನ್ ಬಾರಿಸಿ ಪೆವಿಲಿಯನ್ ಸೇರಿದ್ರು. ಕೊನೆಗೆ ಟೀಂ ಇಂಡಿಯಾ 345 ರನ್‍ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಇಂಗ್ಲೆಂಡ್ ತಂಡ 118 ರನ್‍ಗಳ ಭರ್ಜರಿ ಗೆಲುವು ದಾಖಲಿಸಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ