ಜೇಮ್ಸ್ ಆಂಡರ್ಸನ್ ಈಗ ಸಾರ್ವಕಾಲಿಕ ಶ್ರೇಷ್ಠ ಬೌಲರ್

ಓವೆಲ್: ಟೀಂ ಇಂಡಿಯಾ ವಿರುದ್ಧ ಕೊನೆಯ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಇಂಗ್ಲೆಂಡ್ ತಂಡದ ಘಾತಕ ವೇಗಿ ಜೇಮ್ಸ್ ಆಂಡರ್ಸನ್ ಕೊನೆಯ ಇನ್ನಿಂಗ್ಸ್‍ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 564 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಬಲಗೈ ವೇಗಿ ಸಾರ್ವಕಾಲಿಕ ಶ್ರೇಷ್ಠ ಬೌಲರ್‍ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ವೇಗಿ ಮೆಕ್‍ಗ್ರಾಥ್ (563 ವಿಕೆಟ್) ದಾಖಲೆಯನ್ನ ಹಿಂದಿಕ್ಕಿ ನಾಲ್ಕನೆ ಸ್ಥಾನ ಪಡೆದಿದ್ದಾರೆ.
ಇದಲ್ಲದೇ ವಿಶ್ವದ ಶ್ರೇಷ್ಠ ಬೌಲರ್ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ. ಅಗ್ರ ಟಾಪ್ ಮೂರು ಬೌಲರ್‍ಗಳು ಸ್ಪಿನ್ನರ್‍ಗಳಾಗಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ದಂತ ಕತೆ ಮುತ್ತಯ್ಯ ಮುರಳಿಧರನ್ 800 ವಿಕೆಟ್, ಭಾರತದ ಮಾಜಿ ನಾಯಕ ಶ್ರೇನ್ ವಾರ್ನೆ 708 ಮತ್ತು ಅನಿಲ್ ಕುಂಬ್ಳೆ 564 ವಿಕೆಟ್ ಪಡೆದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ