ಸಿನಿಮಾ ನಟ ಹಾಗೂ ರಾಜಕೀಯ ಮುಖಂಡ ಬಿ.ಸಿ ಪಾಟೀಲ್ ಅವರ ಪುತ್ರಿ ನಟಿ ಸೃಷ್ಟಿ ಪಾಟೀಲ್ ವಿವಾಹ ನಿಶ್ಚಿತಾರ್ಥ ಶನಿವಾರ ಬೆಂಗಳೂರಿನಲ್ಲಿ ನೆರವೇರಿತು.ನಟಿ ಸೃಷ್ಟಿ ಪಾಟೀಲ್ ಮದುವೆ ಆಗುತ್ತಿರುವ ಹುಡುಗನ ಹೆಸರು ಸುಜಯ್ ಬೇಲೂರು. ಮೂಲತಃ ಬೇಲೂರಿನವರಾಗಿರುವ ಸುಜಯ್ ಬೆಂಗಳೂರಿನಲ್ಲಿ ಸ್ವಂತ ಉದ್ಯಮವನ್ನು ಹೊಂದಿದ್ದಾರೆ.’ಹ್ಯಾಪಿ ನ್ಯೂ ಇಯರ್’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗ ಪ್ರವೇಶ ಮಾಡಿದ ಸೃಷ್ಟಿ ಪಾಟೀಲ್ ಒಂದು ಸಿನಿಮಾ ನಂತರ ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಆರಂಭ ಮಾಡಿದ್ದರು. ಕಳೆದ ಬಾರಿ ಚುನಾವಣೆಯಲ್ಲಿ ತಂದೆ ಪರ ಪ್ರಚಾರ ಮಾಡಿ ತಂದೆಯ ಗೆಲುವಿಗೆ ಕಾರಣವಾಗಿದ್ದರು. ಇವರಿಬ್ಬರ ಮದುವೆ ಜನವರಿಯಲ್ಲಿ ನಡೆಯಲಿದೆ.ಸುಜಯ್ ಮತ್ತು ಸೃಷ್ಟಿ ಅವರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು.
Seen By: 70 ಧಾರವಾಡ: ಕೆಲ ತಾಂತ್ರಿಕ ತೊಂದರೆ ಹಾಗೂ ಗೊಂದಲಗಳಿಂದ ರೈತರಿಗೆ ಬೆಳೆವಿಮೆ ಪರಿಹಾರ ನೀಡುವಲ್ಲಿ ವಿಳಂಬವಾಗಿದೆ. ಶೀಘ್ರವೇ ರೈತರ ಖಾತೆಗೆ ಹಣ ಬಿಡುಗಡೆ ಮಾಡುವುದಾಗಿ [more]
Seen By: 77 ಮಂಡ್ಯ/ಕೆ.ಆರ್.ಪೇಟೆ : ಸಾವಯವ ಮತ್ತು ಸಮಗ್ರ ಕೃಷಿಯನ್ನು ರೈತರು ಅಳವಡಿಸಿಕೊಂಡಾಗ ಕೃಷಿಕರ ಆದಾಯ ದ್ವಿಗುಣವಾಗಲು, ರೈತರು ಸ್ವಾಭಿಮಾನಿಗಳಾಗಲು ಸಾಧ್ಯ ಎಂದು ಕೃಷಿ ಸಚಿವ [more]
Seen By: 56 ಕೊಪ್ಪಳ: ಉಪ ಚುನಾವಣೆಯ ಫಲಿತಾಂಶದಿಂದಾಗಿ ಸರ್ಕಾರಕ್ಕೆ ಸರ್ಟಿಫಿಕೇಟ್ ಸಿಕ್ಕಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಪ್ರಧಾನಿ ಮೋದಿ ಅವರ ಆಡಳಿತ ಜನರ ಮನ ಗೆದ್ದಿದೆ [more]