ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಇನ್ನಷ್ಟು ಕುಸಿತ ಕಂಡಿದ್ದು, ಇಂದು ಕೂಡ 45ಪೈಸೆ ಇಳಿಕೆಯಾಗುವ ಮೂಲ ಸಾರ್ವಕಾಲಿಕ ಕನಿಷ್ಠ ದಾಖಲೆಗೆ ತಲುಪಿದೆ.
ಸೋಮವಾರ ವಹಿವಾಟು ಪ್ರಾರಂಭವಾದಾಗ ರೂಪಾಯಿ ಮೌಲ್ಯ 72.18 ಇತ್ತು. ಅಲ್ಲಿಂದ ಮತ್ತೆ ರೂಪಾಯಿ ಮೌಲ್ಯ ಕಡಿಮೆಯಾಗಿ 72.67ಕ್ಕೆ ತಲುಪಿದೆ.
ಹಣದುಬ್ಬರ, ಅಮೆರಿಕನ್ ಕರೆನ್ಸಿ ಡಾಲರ್ಗೆ ಬೇಡಿಕೆ ಹೆಚ್ಚಳ, ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ರೂಪಾಯಿ ಮೌಲ್ಯ ಸತತ ಕುಸಿತ ಕಾಣುತ್ತಿದೆ.
ಷೇರು ಮಾರುಕಟ್ಟೆಯಲ್ಲೂ ಕುಸಿತ ಕಂಡು ಬಂದಿದ್ದು, ಸೆನ್ಸೆಕ್ಸ್ ಮಧ್ಯಾಹ್ನ 12.30ರ ವೇಳೆಗೆ 418.39 ಅಂಕ ಕುಸಿದು, 37,971.43 ಕ್ಕೆ ತಲುಪಿತ್ತು. ನಿಫ್ಟಿಯಲ್ಲೂ ಕುಸಿತ ಕಂಡು ಬಂದಿದ್ದು, ಒಟ್ಟು 118.45 ಅಂಕ ಕುಸಿದು 11,470.65 ಕ್ಕೆ ತಲುಪಿದೆ.