ಲಿವರ್ ಆಯುಷ್‍ನ ಮೊದಲ ಥೆರಪಿ ಸ್ಟೋರ್ ಪ್ರಾರಂಭ

ಬೆಂಗಳೂರು, ಸೆ.9- ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಲಿವರ್ ಆಯುಷ್‍ನ ಮೊದಲ ಥೆರಪಿ ಸ್ಟೋರ್ ಪ್ರಾರಂಭಿಸಲಾಗಿದೆ.
ಲಿವರ್ ಆಯುಷ್ ಥೆರಪಿ ಸ್ಟೋರ್‍ಗೆ ಖ್ಯಾತ ನಟಿ, ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ತಮನ್ನಾ ಭಾಟಿಯಾ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ತಮನ್ನಾ ಭಾಟಿಯಾ, ಆಯುರ್ವೇದ ಒಂದು ಪುರಾತನವಾದ ಸಮಗ್ರ ಚಿಕಿತ್ಸಾ ಪದ್ಧತಿಯಾಗಿದೆ. ಬಹಳ ಹಿಂದಿನಿಂದ ಈ ಪದ್ಧತಿ ಜಾರಿಯಲ್ಲಿದ್ದು, ಇದೀಗ ಮೇಲ್ದರ್ಜೆಗೇರುತ್ತಿರುವ ಜೀವನಶೈಲಿ ಮತ್ತು ಆರೋಗ್ಯದಲ್ಲಿ ಆಗುತ್ತಿರುವ ಏರುಪೇರುಗಳನ್ನು ಸಮತೋಲಿತವಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯ ಬಗ್ಗೆ ನಟಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಈ ಸ್ಟೋರ್‍ನಲ್ಲಿ ಆಯುರ್ವೇದ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅವುಗಳ ಸಾಧಕ-ಬಾಧಕಗಳನ್ನು ಪರಿಶೀಲಿಸಬಹುದು. ಇಲ್ಲಿ ಬಳಸಿರುವ ಪದಾರ್ಥ ಗಳ ಸಂಪೂರ್ಣ ಮಾಹಿತಿಯನ್ನು ಪ್ರದರ್ಶಿಸಲಾಗುತ್ತಿದೆ. ಈ ಎಲ್ಲ ಮಾಹಿತಿಗಳನ್ನು ಗ್ರಾಹಕರು ಪಡೆಯಬಹುದು ಎಂದು ಹೇಳಿದರು.

ಉತ್ತಮ ನೆನಪಿನ ಶಕ್ತಿ ಮತ್ತು ನಿದ್ರೆಗೆ ನೆರವಾಗುವ ಶಿರೊಪಿಚು ಚಿಕಿತ್ಸೆಯನ್ನು ಪಡೆಯುವುದು ಸೂಕ್ತ. ಇದಲ್ಲದೆ, ಕಣ್ಣಿನ ಆರೋಗ್ಯ ವರ್ಧನೆಗೆ ನೇತ್ರಪಿಚು ಬಗ್ಗೆ ನಾನು ತಿಳಿದುಕೊಂಡಿದ್ದೇನೆ ಎಂದು ತಿಳಿಸಿದರು.
ಸೌಂದರ್ಯವರ್ಧನೆಗೆ ಅಗತ್ಯ ಚಿಕಿತ್ಸೆ ಬಯಸುವವರು ಮುಖಲೇಪನ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಈ ಚಿಕಿತ್ಸೆ ಚರ್ಮಕ್ಕೆ ಪುನಶ್ಚೇತನ ನೀಡಿ ಕಾಂತಿ ಹೆಚ್ಚಿಸುತ್ತದೆ ಎಂದು ತಮನ್ನಾ ನುಡಿದರು.
ಲಿವರ್ ಆಯುಷ್ ಸ್ಟೋರ್, ನಂ.241, ಚಿನ್ಮಯ ಮಿಷನ್ ಹಾಸ್ಪಿಟಲ್ ರಸ್ತೆ, ಶಾಂತಿನಗರ ಪಕ್ಕ, ಇಂದಿರಾನಗರ, ಬೆಂಗಳೂರು-38 ವಿಳಾಸದಲ್ಲಿ ಪ್ರಾರಂಭವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ