ಬೆಂಗಳೂರು, ಸೆ.9-ರಾಜ್ಯದ ವಿವಿಧೆಡೆ ಪೆÇಲೀಸ್ ರೆಸಿಡೆನ್ಸಿ ಶಾಲೆ ತೆರೆಯಲು ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಕೋರಮಂಗಲ ಕೆಎಸ್‍ಆರ್‍ಪಿಸಿ ಮೈದಾನದಲ್ಲಿ ಪೆÇಲೀಸ್ ಪಬ್ಲಿಕ್ ಶಾಲೆಯ ಡಾ.ಎಸ್. ರಾಧಾಕೃಷ್ಣ ಬ್ಲಾಕ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೆÇಲೀಸ್ ಸಿಬ್ಬಂದಿ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬುದು ಸರ್ಕಾರದ ಆಶಯ. ಹೀಗಾಗಿ ಇಂಥ ರೆಸಿಡೆನ್ಸಿ ಶಾಲೆಗಳ ಅಗತ್ಯವಿದೆ. ಇದಕ್ಕೆ ಅಗತ್ಯ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಇಂದು ದೇಶದ ಸಾಕ್ಷರತ ಪ್ರಮಾಣ ಹೆಚ್ಚಿದೆ. ಶೇ.80 ರಷ್ಟು ಸಾಕ್ಷರತ ಪ್ರಮಾಣ ತಲುಪಿದ್ದು, ಶಿಕ್ಷಣದಿಂದಲೇ ದೇಶದ ಆರ್ಥಿಕ ಸ್ಥಿತಿ ಬದಲಾಗಿದೆ. ನಮ್ಮ ದೇಶದಲ್ಲಿ ವರ್ಷಕ್ಕೆ 5 ಲಕ್ಷ ಎಂಜಿನಿಯರ್‍ಗಳು ಹಾಗೂ 70 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಪಡೆದವರು ಹೊರಬರುತ್ತಿದ್ದಾರೆ. ಇಡೀ ವಿಶ್ವದಲ್ಲೆಲ್ಲ ನಮ್ಮ ದೇಶದ ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‍ಗಳು ಪ್ರಖ್ಯಾತರಾಗಿದ್ದಾರೆ. . ಇದಕ್ಕೆಲ್ಲ ನಮ್ಮ ದೇಶದಲ್ಲಿ ಆದ ಶಿಕ್ಷಣದಲ್ಲಾದ ಕ್ರಾಂತಿಯೇ ಕಾರಣ ಎಂದರು.
ಶಿಕ್ಷಣ ಇಡೀ ಬದುಕನ್ನೇ ಬದಲಿಸಲಿದೆ. ಹೀಗಾಗಿ ಪ್ರತಿಯೊಬ್ಬರು ಉನ್ನತ ಶಿಕ್ಷಣ ಪಡೆದುಕೊಳ್ಳುವುದು ಮೂಲ ಹಕ್ಕಾಗಬೇಕು ಎಂದು ಹೇಳಿದರು.
ಪೆÇಲೀಸ್ ಪಬ್ಲಿಕ್ ಶಾಲೆಗೆ ಮುಂದಿನ ಬಜೆಟ್‍ನಲ್ಲಿ 15 ಕೋಟಿ ರೂ.ಗಳ ಅನುದಾನ ಒದಗಿಸಿಕೊಡಬೇಕು ಎಂದು ಕೆಎಸ್‍ಆರ್‍ಪಿ ಸಹ ಕಾರ್ಯದರ್ಶಿ ಎಂ.ಇ.ರಾಮಕೃಷ್ಣ ಪ್ರಸಾದ್ ಇದಕ್ಕೂ ಮೊದಲು ಸಚಿವರಿಗೆ ಮನವಿ ಸಲ್ಲಿಸಿದರು.
3000 ಸಾವಿರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಗುರಿ ಹೊಂದಲಾಗಿದ್ದು, ಈ ಶಾಲೆಗೆ ಮತ್ತೊಂದು ಕಟ್ಟಡದ ಅಗತ್ಯವಿದೆ. ಸುಸಜ್ಜಿತ ಸಭಾಗೃಹ, ಪ್ರಯೋಗಾಲಯ, ಆಂಫಿ ಥಿಯೇಟರ್ ಸೇರಿದಂತೆ ಹಲವು ಮೂಲಸೌಕರ್ಯಗಳ ಅಗತ್ಯವಿದೆ. ಇವುಗಳಿಗೆ ಸುಮಾರು 12 ಕೋಟಿ ರೂ.ಭರಿಸಬೇಕಾಗಿದೆ. ಆದ್ದರಿಂದ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದರು.