ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ 292 ಆಲೌಟ್ 40 ರನ್‍ಗಳ ಹಿನ್ನಡೆ

ಓವೆಲ್: ಅಲ್‍ರೌಂಡರ್ ರವೀಂದ್ರ ಜಡೇಜಾ ಅವರ 86 ರನ್ ಗಳ ಭರ್ಜರಿ ಆಟದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‍ನಲ್ಲಿ 292 ರನ್ ಗಳಿಗೆ ಆಲೌಟ್ ಅಯಿತು. ಇದರೊಂದಿಗೆ ಟೀಂ ಇಂಡಿಯಾ 40 ರನ್‍ಗಳ ಹಿನ್ನಡೆ ಅನುಭವಿಸಿತು.
ಎರಡನೆ ದಿನ ಅಟ ಮುಂದುವರೆಸಿದ ಆಲ್‍ರೌಂಡರ್ ರವೀಂದ್ರ ಜಡೇಜಾ ಮತ್ತು ಹನುಮ ವಿಹಾರಿ ಒಳ್ಳೆಯ ಅರಂಭ ನೀಡಿದ್ರು. ಆಂಗ್ಲರ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಹನುಮ ವಿಹಾರಿ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ರು. ಆದರೆ 56 ರನ್‍ಗಳಿಸಿದ್ದಾಗ ಹನುಮ ವಿಹಾರಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿ ಹೊರ ನಡೆದ್ರು. ಇದರೊಂದಿಗೆ ಟೀಂ ಇಂಡಿಯಾಕ್ಕೆ ಮತ್ತೆ ಹಿನ್ನಡೆಯಾಯಿತು. ಬಾಲಂಗೋಚಿಗಳಾದ ಇಶಾಂತ್ ಶರ್ಮಾ 4, ಮೊಹ್ಮದ್ ಶಮಿ 1ರನ್ ಬಾರಿಸಿದ್ರು. ಕೊನೆಯಲ್ಲಿ ಬಂದ ಜಸ್‍ಪ್ರೀತ್ ಬೂಮ್ರಾ ಉತ್ತಮ ಸಾಥ್ ನೀಡಿ 32 ರನ್‍ಗಳ ಜೊತೆಯಾಟ ನೀಡಿ ಭರವಸೆ ಮೂಡಿಸಿದ್ರು. ಏಕಾಂಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ ಅರ್ಧ ಶತಕ ಬಾರಿಸಿ ಸಂಭ್ರಮಿಸಿದ್ರು. ಬೂಮ್ರಾ ನೆರವಿನಿಂದ 86 ರನ್ ಗಳಿಸಿದ್ರು. ಆದರೆ ಬೂಮ್ರಾ ರನೌಟ್ ಆಗುವ ಮೂಲಕ ಆಂಗ್ಲರನ್ನ ಹಿಂದಿಕ್ಕಲು ಆಗಲಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ