ಲಂಡನ್: ಭಾರತದ ಬ್ಯಾಂಕ್ಗಳಿಗೆ ಪಂಗನಾಮ ಹಾಕಿ, 9000 ಕೋಟಿ ರೂ. ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಲಂಡನ್ನಲ್ಲಿ ಆರಾಮಾಗಿ ಓಡಾಡಿಕೊಂಡಿದ್ದಾರೆ.
ಹೀಗೆ ಲಂಡನ್ನ ಕೆನ್ನಿಂಗ್ಟನ್ನ ಓವಲ್ ಕ್ರೀಡಾಂಗಣದ ಬಳಿ ಕಾಣಿಸಿಕೊಂಡ ವಿಜಯ್ ಮಲ್ಯರನ್ನು ಪತ್ರಕರ್ತನೊಬ್ಬ ಭಾರತಕ್ಕೆ ಹಿಂದಿರುಗುವ ಬಗ್ಗೆ ಪ್ರಶ್ನಿಸಿದ್ದಾನೆ. ಇದಕ್ಕೆ ಮಲ್ಯ (judge will decide) ನ್ಯಾಯಾಧೀಶರು ನಿರ್ಧರಿಸುತ್ತಾರೆ’ ಎಂದು ಉತ್ತರಿಸಿದ್ದಾರೆ.
ಮತ್ತೆ ಅದೇ ಪ್ರಶ್ನೆ ಕೇಳಿದ ಪತ್ರಕರ್ತನ ವಿರುದ್ಧ ಮಲ್ಯ ಸಿಡಿಮಿಡಿಗೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವೇಳೆ ತಾನು ಯಾವುದೇ ಮೀಡಿಯಾಗಳಿಗೆ ಸಂದರ್ಶನ ನೀಡುವುದಿಲ್ಲ ಎಂದ ಮಲ್ಯ ಹೇಳಿ ಕಾರ್ ಹತ್ತಿ ಹೊರಟು ಹೋಗಿದ್ದಾರೆ.