ಬಾಂಗ್ರಾ ನೃತ್ಯ ಮಾಡಿ ಗಮನ ಸೆಳೆದ ಶಿಖರ್ ಧವನ್

ಓವೆಲ್: ಓವೆಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಮೊದಲ ದಿನದಾಟದ ಪಂದ್ಯದಲ್ಲಿ ಆರಂಭದಲ್ಲಿ ಎಡವಿದ್ರು ದಿನದಾಟದ ಅಂತ್ಯದ ವೇಳೆಗೆ ಮೇಲುಗೈ ಸಾಧಿಸಿತು. ತಂಡದ ಆರಂಭಿಕ ಬ್ಯಾಟ್ಸ್‍ಮನ್ ಶಿಖರ್ ಧವನ್ ಬಾಂಗ್ರ ಡ್ಯಾನ್ಸ್ ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಟೀಂ ಇಂಡಿಯಾ ವೇಗಿಗಳು ಇಂಗ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳನ್ನ ಬೇಗನೆ ಪೆವಿಲಿಯನ್‍ಗೆ ಒಬ್ಬರ ಹಿಂದೆ ಒಬ್ಬರ ಕಳುಹಿಸಿ ಸಂಭ್ರಮಿಸಿದ್ರು. ಬೌಂಡರಿ ಲೈನ್‍ನಲ್ಲಿದ್ದ ಶಿಖರ್ ಧವನ್ ಈ ವೇಳೆ ಬಾಂಗ್ರ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಇದು ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿತು.ಪ್ರೇಕ್ಷಕರು ಬಾಂಗ್ರಾ ನೃತ್ಯ ನೋಡಿ ಒನ್ಸ್ ಮೋರ್ ಒನ್ಸ್ ಮೋರ್ ಎನ್ನುತ್ತಿದ್ದರು. ಇತ್ತ ವೀಕ್ಷಕ ವಿವರಣೆಕಾರ ಹರ್ಭಜನ್ ಸಿಂಗ್ ಕೂಡ ಬಾಂಗ್ರ ನೃತ್ಯ ಮಾಡಿ ಇನ್ನಷ್ಟು ಕಳೆ ಹೆಚ್ಚಿಸಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ