ಬೆಂಗಳೂರು, ಸೆ.8-ನಗರದಲ್ಲಿ ಪ್ರಪ್ರಥಮ ಬಾರಿಗೆ ಗಣೇಶ ಚತುರ್ಥಿ ಪ್ರಯುಕ್ತ ನಾಲ್ಕು ಸಾವಿರ ಕೆಜಿ ತೂಕದ ಬೃಹದಾಕಾರಾದ ಲಡ್ಡು ನಿರ್ಮಿಸಲು ಸಕಲ ಸಿದ್ದತೆ ನಡೆದಿದೆ.
ಜೆ.ಪಿ.ನಗರದ ಪುಟ್ಟೇನಹಳ್ಳಿಯ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ನಾಲ್ಕು ಸಾವಿರ ಕೆಜಿ ತೂಕದ ಲಡ್ಡು ಹಾಗೂ ಪರಿಸರ ಸ್ನೇಹಿ ಗಣಪನನ್ನು 30 ಅಡಿ ಎತ್ತರದ ಕಬ್ಬಿನಲ್ಲಿ ಪ್ರತಿಷ್ಠಾಪಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಟ್ರಸ್ಟಿ ರಾಮ್ಮೋಹನ್ರಾಜ್ ತಿಳಿಸಿದ್ದಾರೆ.
ಪ್ರತಿ ಗಣೇಶ ಹಬ್ಬಕ್ಕೂ ವಿಶಿಷ್ಟವಾದದ್ದನ್ನು ಭಕ್ತರಿಗೆ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಿದ್ದು, ಇದಕ್ಕಾಗಿ ಒಂದು ಸಾವಿರ ಕೆಜಿ ಕಡ್ಲೆ ಹಿಟ್ಟು, ಎರಡು ಸಾವಿರ ಕೆಜಿ ಸಕ್ಕರೆ, 700 ಕೆಜಿ ಎಣ್ಣೆ, 300ಕೆಜಿ ತುಪ್ಪ, 50 ಕೆಜಿ ಗೋಡಂಬಿ, 50ಕೆಜಿ ಒಣದ್ರಾಕ್ಷಿ, 5 ಕೆಜಿ ಏಲಕ್ಕಿ ಬಳಸಿ ಬೃಹತ್ ಲಡ್ಡು ನಿರ್ಮಾಣಗೊಳ್ಳುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಕಬ್ಬಿನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಹಬ್ಬದ ನಂತರ ಲಡ್ಡುವನ್ನು ಭಕ್ತರಿಗೆ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ ದೂ.ಸಂ.9845044434 ಸಂಪರ್ಕಿಸಬಹುದು.