ಬೆಂಗಳೂರು, ಸೆ.8- ರಾಜ್ಯ ಸರ್ಕಾರದ ಮಾತೃಪೂರ್ಣ ಹಾಗೂ ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಗರ್ಭಿಣಿ ಹಾಗೂ ಬಾಣಂತಿಯರು ಆರೋಗ್ಯರಕ್ಷಣೆ ಮಾಡಿಕೊಳ್ಳಿರಿ ಎಂದು ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ವೃತ್ತದ ಅಂಗನವಾಡಿ ಮೇಲ್ವಿಚಾರಕಿ ವೀಣಾ ಗುಮ್ಮ ತಿಳಿಸಿದ್ದಾರೆ.
ಹೊನ್ನಗನಹಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪೆÇೀಷಣಾ ಅಭಿಯಾನ ಯೋಜನೆಯ ಪೆÇೀಷಣಾ ಮಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಅಂಗನವಾಡಿ ಕೇಂದ್ರಗಳಲ್ಲಿ ಸೆಪ್ಟೆಂಬರ್ತಿಂಗಳಿನಲ್ಲಿ ಪೆÇೀಷಣೆ ಮಾಸಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು.
ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉಚಿತ ಪೌಷ್ಠಿಕಾಂಶಯುಕ್ತ ಬಿಸಿಯೂಟ ನೀಡಲಾಗುತ್ತಿದೆ. ತಾಯಿ ಹಾಗೂ ಶಿಶುವಿನಲ್ಲಿ ಅಪೌಷ್ಟಿಕತೆ ನಿವಾರಿಸುವ ಮಾತೃಪೂರ್ಣ ಯೋಜನೆಗೆ ಪೂರಕವಾಗಿ ಮಾತೃವಂದನಾ ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಮಾತೃಪೂರ್ಣ ಯೋಜನೆಯಲ್ಲಿ 25 ದಿನಗಳ ಕಾಲ ಶುಚಿ-ರುಚಿಯ ಬಿಸಿಯೂಟ ಹಾಗೂ ಮಾತೃವಂದನಾ ಯೋಜನೆಯಲ್ಲಿ ಮೂರು ಹಂತಗಳಲ್ಲಿ ಗರ್ಭಿಣಿಯ ಬ್ಯಾಂಕ್ ಖಾತೆಗೆ ಐದು ಸಾವಿರ ಪೆÇ್ರೀ ಧನವನ್ನು ನೇರವಾಗಿ ಜಮೆ ಮಾಡುವ ಕಾರಣ ತಪ್ಪದೆ ಹೆಸರು ನೋಂದಾಯಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಚನ್ನೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಎಚ್.ಆರ್.ಸೋಮಶೇಖರ್, ವರಲಕ್ಷ್ಮೀ ವೀರೇಶ್, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳ, ಕಾಂತಮ್ಮ, ಮಂಜುಳ, ನಾಗಲಕ್ಷ್ಮಮ್ಮ, ಸಹಾಯಕಿ ಲಕ್ಷ್ಮಮ್ಮ ಮತ್ತಿರರಿದ್ದರು.