ಬೆಂಗಳೂರು,ಸೆ.7- ವಿಶ್ವ ಆತ್ಮಹತ್ಯೆ ತಡಗಟ್ಟುವಿಕೆ ದಿನವಾದ ಸೆ.10ರಂದು ನಗರದಲ್ಲಿ ಲಿಂಗ ಸಮಾನತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಕ್ರಿಸ್ಪ್ ಸಂಘಟನೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಲಿದೆ ಎಂದು ಅಧ್ಯಕ್ಷ ಕುಮಾರ್ ಜಾಹಿರ್ದಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನುಗಳನ್ನು ದುರ್ಬಳಕೆ ಮಾಡುವ ಮಹಿಳೆಯರ ವಿರುದ್ದ ಕ್ರಮ ತೆಗೆದುಕೊಳ್ಳಲು ರಾಷ್ಟ್ರೀಯ ಆಯೋಗಕ್ಕೆ ಅನುಗುಣವಾಗಿ ರಾಷ್ಟ್ರೀಯ ಪುರುಷರ ಆಯೋಗ ರಚಿಸಬೇಕೆಂದು ತಿಳಿಸಿದರು.
ಪ್ರತಿ ನಗರ ಪೆÇಲೀಸ್ ಕಮೀಷನರ್ ಕಚೇರಿಯಲ್ಲಿ ಪುರುಷರಿಗಾಗಿ ಸಹಾಯವಾಣಿ ಬೇಕು. ಮಹಿಳಾ ಕೇಂದ್ರಿತ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳು ಬೆದರಿಕೆಯೊಡ್ಡುವ ಕ್ರೂರ ಹೆಂಡತಿಯರ ವಿರುದ್ಧ ದೂರುಗಳನ್ನು ದಾಖಲಿಸಲು ಅಧಿಕಾರ ನೀಡಬೇಕು ಎಂದರು.
ಅತ್ಯಾಚಾರ ಕಾನೂನು, ಮಹಿಳಾ ಕೇಂದ್ರಿತ ಕಾನೂನುಗಳು ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಇತ್ಯಾದಿಗಳನ್ನು ದುರ್ಬಳಕೆ ಮಾಡುವ ಮಹಿಳೆಯರನ್ನು ಶಿಕ್ಷಿಸಬೇಕು ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಮಾಡಲಾಗುವುದು ಎಂದರು.






